ಮಹಿಳೆಯರು ಇಂದು ಸರ್ವ ರಂಗದಲ್ಲೂ ಮುಂದು: ಕಣವಿ

ಮಹಿಳೆಯರು ಇಂದು ಸರ್ವ ರಂಗದಲ್ಲೂ ಮುಂದು: ಕಣವಿ


ರಾಣಿಬೆನ್ನೂರ 12: ಮಹಿಳೆಯರು ಇಂದು ಸರ್ವ ರಂಗದಲ್ಲೂ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು      ನ್ಯಾಯವಾದಿ ಅನುಪಮ ಕಣವಿ ಹೇಳಿದರು.

   ಇಲ್ಲಿನ ಹಲಗೇರಿ ರಸ್ತೆಯ ಬಿಎಜೆಎಸ್‍ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ಆದರೆ ಸಮಾನತೆಗಾಗಿ ಇಂದು ಮಹಿಳೆಯರು ಹೋರಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದರು.

     ಪ್ರಾಚಾರ್ಯ ಎಸ್.ಎ. ತಾಂಬೆ ಅಧ್ಯಕ್ಷತೆ ವಹಿಸಿದ್ದರು.  ಡಾ. ಪುಷ್ಪಾಂಜಲಿ ಕಾಂಬಳೆ, ಡಾ. ಜ್ಯೋತಿ ಮುದಿಗೌಡ್ರ, ಮಲ್ಲಮ್ಮ ಕೋರಿ, ಪ್ಲಥ್ವಿರಾಜ ಕಟ್ಟಿಮನಿ, ದೇವರಾಜ ಹಂಚಿನಮನಿ, ಅಂಬಿಕಾ ನಿಂಗನಗೌಡ್ರ, ಜಯಮ್ಮ ಲಮಾಣಿ, ರೇಣುಕಾ, ಪೂಜಾ ಹುಲ್ಲತ್ತಿ, ರೇಣುಕಾ ಓಲೇಕಾರ ಇದ್ದರು.

ಸುದ್ದಿ ಓದಿ