ಮಾನಕ್ಕಾಗಿ ಪ್ರಾಣ ನೀಡುವಲ್ಲಿ ಮಹಿಳೆಯರೇ ಮುಂದು : ಕಿಚಡಿ
ಮಹಾಲಿಂಗಪುರ 18: ಪ್ರಾಣಕ್ಕಿಂತ ಮಾನಕ್ಕೆ ಬೆಲೆ ನೀಡುವಲ್ಲಿ ಸ್ತ್ರೀಯರೇ ಮುಂದು, ಮಾನ ರಕ್ಷಣೆಗಾಗಿ ಏಕಕಾಲದಲ್ಲಿ 7 ನೂರು ಸ್ತ್ರೀಯರು ಚಿತೆಗೆ ಹಾರಿದ ಇತಿಹಾಸವಿದೆ ಎಂದು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಉಪಾಧ್ಯಕ್ಷೆ ಅಕ್ಕಾತಾಯಿ ಕಿಚಡಿ ಹೇಳಿದರು.
ಪಂಚಮಸಾಲಿ ಸಮಾಜದ ಮಹಿಳಾ ಘಟಕದ ವತಿಯಿಂದ ಸ್ಥಳೀಯ ಚನ್ನಗೀರೀಶ್ವರ ಸಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಈ ದಿನ ಜಾಗತಿಕ ಮಟ್ಟದಲ್ಲಿ ಮಹಿಳೆಯರ ಸಾಧನೆಗೆ ಗೌರವ ಸಲ್ಲಿಸುವ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆಗಳ ವಿರುದ್ಧ ಧ್ವನಿ ಎತ್ತುವ ದಿನ, ಅವರ ಕೊಡುಗೆಯ ಸರಣೆಯ ದಿನ, ಜಾಗೃತಿಯ ಅರಿವಿನ ದಿನ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿದ್ಯಾ ದಿನ್ನಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ಭೂಮಿ ತೂಕದ ವ್ಯಕ್ತಿತ್ವ ಮಹಿಳೆಯದ್ದು, ಅವಳ ಸಾಮರ್ಥ್ಯ,ಸಾಧನೆ ವರ್ಣಿಸಲಸದಳ ಎಂದರು.
ಆಧ್ಯಾತ್ಮ ಚಿಂತಕಿ ಕಾಶಿಬಾಯಿ ಪುರಾಣಿಕ ಮಾತನಾಡಿ, ಮಾತೃದೇವೋಭವ ಎಂಬಂತೆ ಜಗದ ಎಲ್ಲಾ ಭಾರ ಹೊತ್ತ ದೇವತೆ ಹೆಣ್ಣು, ಸಂಸ್ಕೃತಿ ಕಲಿಸುವ ತಾಯಿ, ಜಗದ ಪಾಲಕಿ, ಪೋಷಕಿ ಹೆಣ್ಣು ಎಂದರು.
ಡಾ.ಉಷಾ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರ ಶ್ಮಿಸುನ ಸ್ತ್ರೀಶಕ್ತಿ ಅಭಿನಂದನೀಯ, ಅವಳ ಶ್ರಮ ಮತ್ತು ಸಾಧನೆಗೆ ಧೈರ್ಯ ತುಂಬುವ ಈ ಕಾರ್ಯ ಶ್ಲಾಘನೀಯ ಎಂದರು.
ಉಪನ್ಯಾಸಕಿ ಸುವರ್ಣಾ ಮುದ್ಲಾಪುರ, ಕಾಸಿಬಾಯಿ ಕೊಣ್ಣೂರ ಮಾತನಾಡಿದರು.ಸಾಧಕ ಮಹಿಳೆಯರಾದ ರೇಣುಕಾ ಶಿವಲಿಂಗ ಸಿದ್ನಾಳ, ಡಾ.ಶಿವಾನಿ ಹರೀಶ ಬಿಳಗಲಿ, ಮಂಜುಳಾ ಶ್ರೀಶೈಲ ಭದ್ರಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಅಮೃತಾ ದೇವರೇಶ ಉಳ್ಳಾಗಡ್ಡಿ ಪ್ರಥಮ, ಲಕ್ಷಿ?? ಮುಕುಂದ ದ್ವಿತೀಯ, ಎಸ್.ಎಸ್.ದಾಶಾಳ ತೃತೀಯ ಹಾಗೂ ಜಾನಪದ ಗಾಯನ ಸ್ಪರ್ಧೆಯಲ್ಲಿ ಸುವರ್ಣಾ ಪಾಟೀಲ ಪ್ರಥಮ, ನೀಲಾಂಬಿಕಾ ಶಿವಾನಂದ ಪಾಟೀಲ, ಕಸ್ತೂರಿ ಪೂಜಾರಿ ತೃತೀಯ ಸ್ಥಾನ ಗಳಿಸಿ ಬಹುಮಾನ ಪಡೆದರು.
ಶಿಕ್ಷಕಿ ಸರೋಜಿನಿ ಕುಳಲಿ ಪ್ರಾರ್ಥಿಸಿ, ಕಾರ್ಯದರ್ಶಿ ಸರೋಜಿನಿ ಶಿರೋಳ ಸ್ವಾಗತಿಸಿ, ಸುಮಾ ಉಳ್ಳಾಗಡ್ಡಿ ವಂದಿಸಿ, ಖಜಾಂಚಿ ರೇಣುಕಾ ಹುಬ್ಬಳ್ಳಿ ನಿರೂಪಿಸಿದರು.
ಸಹಕಾರ್ಯದರ್ಶಿ ಡಾ.ಶಶಿರೇಖಾ ಹುದ್ದಾರ, ಸದಸ್ಯರಾದ ಭಾರತಿ ದಲಾಲ, ನೀಲವ್ವ ಖೋತ, ಜಯಶ್ರೀ ಪಟ್ಟಣಶೆಟ್ಟಿ, ಅನಿತಾ ಸುಣಧೋಳಿ, ಕಾಶಿಬಾಯಿ ಉಮರಾಣಿ, ಬಸವ್ವ ಅಮ್ಮಣಗಿ, ಮಹಾನಂದಾ ಮುನ್ಯಾಳ, ಪೂರ್ಣಿಮಾ ನಂದೆಪ್ಪನವರ ಶಸಿಕಲಾ ವಜ್ರಮಟ್ಟಿ, ಶಕುಂತಲಾ ವಜ್ರಮಟ್ಟಿ, ಮಂಜುಳಾ ದಿನ್ನಿಮನಿ, ಮೀನಾಕ್ಷಿ ಉಳ್ಳಗಡ್ಡಿ, ರತ್ನಾಬಾಯಿ ದಲಾಲ, ಮಾಲಾ ಶಿರೋಳ, ಭರತಿ ಸೂರಗೊಂಡ, ರೇಖಾ ಪೂಜಾರಿ, ಜಯಶ್ರೀ ಖೋತ, ಭಾಗವ್ವ ಮೇಟಿ, ಶಾರದಾ ಬಿಜ್ಜರಗಿ, ಭಾರತಿ ಮುತ್ತಪ್ಪಗೋಳ, ಡಾ.ಎ.ಆರ್,ಬೆಳಗಲಿ, ಈರ್ಪ ದಿನ್ನಮನಿ, ಎಸ್.ಎಮ್.ಉಳ್ಳಾಗಡ್ಡಿ, ಹನಮಂತ ಕೊಣ್ಣೂರ, ಬಸಪ್ಪ ಕೊಪ್ಪದ, ಡಾ.ಅಶೋಕ ದಿನ್ನಿಮನಿ, ಹನಮಂತ ಶಿರೋಳ, ವಿಜಯಕುಮಾರ ಕುಳಲಿ, ಬಸವರಾಜ ದಲಾಲ, ಸೇರಿದಂತೆ ಇನ್ನೂ ಹಲವಾರು ಜನ ಭಾಗಿಯಾಗಿದ್ದರು.