ಮಹಲಿಂಗಪುರ

ಮಹಿಳಾ ವಾಲಿಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಮಹಿಳಾ ವಾಲಿಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಮಹಾಲಿಂಗಪುರ 20: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಹಿಳಾ ವಾಲಿಬಾಲ್ ತಂಡವು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು ಮುಧೋಳ ಇವರ ಸಂಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಕಾಲೇಜಿನ ಏಸ್ ಡಿಎಂಸಿ ಅಧ್ಯಕ್ಷ ಮಹೇಶ ಜಿಡ್ಡಿಮನಿ, ಉಪಾಧ್ಯಕ್ಷ ವಿಜಯ ಸಬಕಾಳೆ, ಕಾಲೇಜಿನ ಪ್ರಾಚಾರ್ಯ ಶಿವಪ್ಪ ಜೋಡಟ್ಟಿ, ಸಿಬ್ಬಂದಿಗಳಾದ ಶ್ರೀನಿವಾಸ ಚನ್ನಾಳ, ವಿಜಯಲಕ್ಷ್ಮಿ ಲಿಂಬಿಕಾಯಿ, ರಾಜೇಶ್ರೀ ತುಕ್ಕಾನಟಿ, ದಾನಮ್ಮ ಹಳ್ಳಿ, ವಕೀಲರಾದ ಪವನ ಶಿರೋಳ, ತಂಡದ ಕೋಚ ಭೀಮು ಸಿದ್ನಾಳ ಸೇರಿದಂತೆ ತಂಡದ ನಾಯಕಿ ಮಹಾನಂದ ಪಾಶ್ಚಾಪೂರ ಹಾಗೂ ಎಲ್ಲ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು. 


ಸುದ್ದಿ ಓದಿ