ಶಿರಹಟ್ಟಿ

ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮುಖ್ಯ: ಶಾಸಕ ಡಾ. ಚಂದ್ರು ಲಮಾಣಿ

ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮುಖ್ಯ: ಶಾಸಕ ಡಾ. ಚಂದ್ರು ಲಮಾಣಿ

ಶಿರಹಟ್ಟಿ 10: ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಇನ್ನೂ ಇತ್ಯಾದಿ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಹಾಗೆಯೇ ಮಹಿಳೆಯರು ಸಾಮಾಜಿಕ ವ್ಯವಹಾರಗಳ ಮೂಲಕ ಅರ್ಥಿಕ ಭದ್ರತೆಯನ್ನು ಹೊಂದುವುದರ ಮೂಲಕ ಸಮಾಜದ ಹಾಗೂ ತಮ್ಮ ಕುಟುಂಬಗಳಲ್ಲಿ ಅಭಿವೃದ್ಧಿಯ ಶಿಲ್ಪಿಗಳಾಗಿ ಮುಂದುವರಿಯುತ್ತಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. 

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾ ಭವನದಲ್ಲಿ ಎಸ್‌ಕೆಡಿಆರ್‌ಡಿಪಿ ವತಿಯಿಂದ ಹಮ್ಮಿಕೊಳ್ಳಲಾದ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಗ್ರಂಥಗಳಲ್ಲಿ ಅಡಕವಾಗಿದೆ. ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆಯು ಒಂದು ಸಮುದಾಯದ ಹಾಗೂ ದೇಶದ ಅಭಿವೃದ್ದಿಗೆ ಕಾರಣಕರ್ತಳಾಗುತ್ತಾಳೆ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಅರಮನೆ ಜಪದಕಟ್ಟಿಮಠ ಮೈಸೂರು ಮತ್ತು ಬನ್ನಿಕೊಪ್ಪ ಬೃಹನ್ಮಠದ ಶ್ರೀಗಳಾದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಬೆಳ್ಳಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ನಿರ್ವಾಣಿಶೆಟ್ಟರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕ ಯೋಗೀಶ ಎ, ಮಾಜಿ ಶಾಸಕರುಗಳಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಪಿಎಸ್‌ಐ ಈರಣ್ಣ ರಿತ್ತಿ, ಗ್ರಾಮದ ಹಿರಿಯರಾದ ಆರ್‌ಆರ್ ಗಡ್ಡದ್ದೇವರಮಠ, ಗ್ರಾ.ಪಂ ಉಪಾಧ್ಯಕ್ಷೆ ಗಂಗವ್ವ ತಳವಾರ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಮಾಜಿ ಅಧ್ಯಕ್ಷೆ ನೇತ್ರಾ ಸಜ್ಜನರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಪರಶುರಾಮ ಮಲ್ಲಾಡದ, ಮಲ್ಲಯ್ಯ ಶೀಲವಂತಮಠ, ರಫೀಕ ಬಡಿಗೇರ, ಶೀವಾನಂದ ಶ್ಯಾಗೋಟಿ, ರುಕ್ಮಿಣಿ ಬಸವರಡ್ಡಿ, ದಿಶಾದಬೀ ಚೌರಿ ಹಾಗೂ ನೂರಾರು ಮಹಿಳೆಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರೆ​‍್ಣಯನ್ನು ಬೆಳ್ಳಟ್ಟಿ ವಲಯ ಮೇಲ್ವಿಚಾರಕಿ ಶಾಂತಾ ಬಿ, ಸ್ವಾಗತವನ್ನು ಪ್ರಭಾರಿ ಯೋಜನಾಧಿಕಾರಿ ಓಮ ಮರಾಠೆ ನೆರವೇರಿಸಿದರು. 


ಸುದ್ದಿ ಓದಿ