ಸಿಡಿಲು ಬಡಿದು ಮಹಿಳೆ ಮೃತ; ಜಿಲ್ಲಾಧಿಕಾರಿ ಚೆಕ್ ವಿತರಣೆ
ಲೋಕದರ್ಶನ ವರದಿ
ಕುಷ್ಟಗಿ 26; ತಾಲೂಕಿನ ಹನಮನಾಳ ಹೋಬಳಿಯ ಶ್ಯಾಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ಮಹಿಳೆ ಮೃತಪಟ್ಟಿದ್ದ ಕಾರಣ ಬುಧವಾರ ಬೆಳಿಗ್ಗೆ ಮಹಿಳೆಯ ವಾರಸುದಾರರಾದ ಪರಸಪ್ಪ ದುರಗಪ್ಪ ಕಮತರ ಇವರಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು 5 ಲಕ್ಷ ರೂಪಾಯಿ ಮೌಲ್ಯದ ಚೆಕ್ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರು ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಕರ್ಣಂ ರಾಘವೇಂದ್ರ ಕುಲಕರ್ಣಿ, ಉಪತಹಶೀಲ್ದಾರರು ಆಂಜನೇಯ, ಕಂದಾಯ ನೀರೀಕ್ಷಕರು ರಜಾಕ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಉಪಸ್ಥಿತರಿದ್ದರು.