ಮಹಲಿಂಗಪುರ

ಮುಂಬರುವ ಬಜೆಟಿನಲ್ಲಿ ಮಹಾಲಿಂಗಪುರ ತಾಲೂಕು ಘೋಷಿಸುವರೇ ಸಿ.ಎಂ.?

ಮುಂಬರುವ ಬಜೆಟಿನಲ್ಲಿ ಮಹಾಲಿಂಗಪುರ ತಾಲೂಕು ಘೋಷಿಸುವರೇ ಸಿ.ಎಂ.?

ಬಜೆಟಿನಲ್ಲಿಯಾದರೂ ಮಹಾಲಿಂಗಪುರ ತಾಲೂಕಾ ಹೋರಾಟಕ್ಕೆ ಮುಕ್ತಿ ಸಿಗುವುದೇ ? 

300 ದಿನ ಪೂರೈಸಿ ಮುನ್ನೆಡೆದಿರುವ ಹೋರಾಟಕ್ಕೆ ಸಿ.ಎಂ ನ್ಯಾಯ ವದಿಗಿಸುವರೆ ? 

ಮಹೇಶ ಆರಿ. 

ಮಹಾಲಿಂಗಪುರ : ನಿರಂತರ ಅನ್ಯಾಯ ಅನುಭವಿಸುತ್ತಿರುವ ರಾಜ್ಯದ ವಾಣಿಜ್ಯ ನಗರಗಳಲ್ಲಿ ಒಂದಾದ ಮಹಾಮಹಿಮಾ ಪುರುಷ ಜಗದ್ಗುರು  ಮಹಾಲಿಂಗೇಶ್ವರರು ನೆಲೆಸಿರುವ ಪುಣ್ಯಭೂಮಿ ನಗರ ಮಹಾಲಿಂಗಪುರ, ಕಳೆದ ನಾಲ್ಕು ದಶಕಗಳಿಂದ ತಾಲೂಕಿಗಾಗಿ ನಿರಂತರ ಹೋರಾಟ ಸುಮಾರು 310 ಕ್ಕೂ ಹೆಚ್ಚು ದಿನ ನಡೆದಿದೆ, ಆದರೆ ನಗರದ ಜನತೆಗೆ ಇನ್ನು ನ್ಯಾಯ ಸಿಕ್ಕಿಲ್ಲ, ಆದರೆ ಈಗ ನ್ಯಾಯ ಸಿಗುವ ಸಮಯ ಬಂದಿದೆ, ಮುಂಬರುವ ರಾಜ್ಯ ಬಜೆಟಿನಲ್ಲಿ ನಗರಕ್ಕೆ ತಾಲೂಕಾ ಭಾಗ್ಯ ಕೊಡುವ ಗುರುತರ ಜವಾಬ್ದಾರಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮೇಲೆ ಇದೇ. 

ನೂರಾರು ಕೋಟಿ ಕಂದಾಯ : ವಾಣಿಜ್ಯ ನಗರ ಎಲ್ಲಾ ವಿಧದಿಂದ ತಾಲೂಕಾಗುವ ಅರ್ಹತೆ ಹೊಂದಿದೆ, ಈ ನಗರದಿಂದ ಸರಕಾರಕ್ಕೆ ವಾರ್ಷಿಕವಾಗಿ ಎಲ್ಲ ವಿಧದಿಂದ ಸುಮಾರು ನೂರರಿಂದ ನುರೈವತ್ತು ಕೋಟಿ ರೂಪಾಯಿ ಕಂದಾಯ ಹೋಗುತ್ತದೆ, ನಗರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿ ರಾಜ್ಯದ ಅತೀ ದೊಡ್ಡ ಹಾಗೂ ಹಳೆಯ ಸಕ್ಕರೆ ಕಾರ್ಖಾನೆ ಇದೇ, ರಾಜ್ಯದ ಎರಡನೆಯ ಅತೀ ದೊಡ್ಡ ಕೃಷಿ ಮಾರುಕಟ್ಟೆ ಇದೇ, ಇಲ್ಲಿ ತಯಾರಿಸುವ ಬೆಲ್ಲಕ್ಕೆ ವಿಶ್ವಾದ್ಯಾದಂತ ಬೇಡಿಕೆ ಇದೇ, ಇಲ್ಲಿನ ಬೆಲ್ಲ ಪಾಕಿಸ್ತಾನ, ಸೌದಿ ಅರೇಬಿಯಾ, ಅಫಘಾಣಿಸ್ತಾನ, ದುಬೈ ದೇಶಗಳಿಗೆ ಹೋಗುತ್ತದೆ. 

ಅರ್ಹತೆ : ನಗರದ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳು ಸೇರಿ ಸುಮಾರು ಒಂದು ಲಕ್ಷ ಐವತ್ತು ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ, ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ ಶಾಖೆಗಳಿವೆ ಅನೇಕ ಸ್ಥಳೀಯ ಬ್ಯಾಂಕುಗಳು, ಸಣ್ಣ ಸಣ್ಣ ಬ್ಯಾಂಕಗಳು,ಹಲವಾರು ಸೌಹಾರ್ದ ಬ್ಯಾಂಕಗಳಿವೆ, ಮುಖ್ಯವಾಗಿ ಹುಬ್ಬಳ್ಳಿ ಬಿಟ್ಟರೆ ಉತ್ತರ ಕರ್ನಾಟಕಕ್ಕೆ ವಿದ್ಯುತ್ ವಿತರಿಸುವ 220 ಕೆ.ವ್ಹಿ ಕೇಂದ್ರ ಇದೇ ನೂರಾ ಐವತ್ತು ವರ್ಷ ಹಳೆಯ ಪುರಸಭೆ ಇದೇ, ಅನೇಕ ಶಾಲೆ ಕಾಲೇಜುಗಳಿವೆ ಇಪ್ಪತ್ತುಕ್ಕೂ ಹೆಚ್ಚು ಭಾರಗಳಿವೆ ( ವೈನ ಶಾಪ ) ಸುಸಜ್ಜಿತ ಬಸ ನಿಲ್ದಾಣ ಇದೇ  ಒಟ್ಟು ಮೂವತ್ತೇರಡು ಸಮುದಾಯಗಳ ಜನ ಸುಖ,ಶಾಂತಿ,ನೆಮ್ಮದಿಯಿಂದ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. 

ಹಳ್ಳಿಗಳು : ಈ ತಾಲೂಕಿಗೆ ಸಂಬಂಧಿಸಿದಂತೆ ಬರುವ ಹಳ್ಳಿಗಳು ಕೆಸರಗೋಪ್ಪ, ಬಿಸನಾಳ, ಸೈದಾಪುರ, ಸಮೀರವಾಡಿ, ಸಂಗಾನಟ್ಟಿ, ಮಾಧಭಾವಿ, ಮಾರಾಪುರ, ಧವಳೇಶ್ವರ, ನಂದಗಾಂವ, ಅಕ್ಕಿಮರಡಿ, ಬೆಳಗಲಿ, ನಾಗರಾಳ, ಮಳಲಿ, ಮಿರ್ಜಿ,ಸೇರಿದಂತೆ ಇವೆ. ಹಳೆಯ ಪೊಲೀಸ್ ಸ್ಟೇಷನ್ ವಾಪ್ತಿ ಗಣನೆಗೆ ತೆಗೆದುಕೊಂಡರೆ, ಮುಗಳಖೊಡವರೆಗೆ ಬರುವುದರಿಂದ ಸುಮಾರು ಎರಡು ಲಕ್ಷ ಜನಸಂಖ್ಯೆ ಆಗುತ್ತದೆ.ಅಲ್ಲದೆ ಈ ಎಲ್ಲ ಹಳ್ಳಿಗಳ ಜನರಿಗೆ ಬೇರೆ ತಾಲೂಕಿಗೆ ಹೋಗಿ ತಮ್ಮ ಸರ್ಕಾರಿ ಕಚೇರಿ ಕೆಲಸ ಮುಗಿಸಿ ಬರಬೇಕು ಎಂದರೆ ಒಂದು ದಿನವೇ ಬೇಕು,ಇದರ ಖರ್ಚು ಹೆಚ್ಚಾಗುತ್ತದೆ ಕಾರಣ ಇದನ್ನು ತಾಲೂಕು ಮಾಡುವುದರಿಂದ ಎಲ್ಲ ಜನರಿಗೆ ಒಳ್ಳೆಯದಾಗುತ್ತದೆ.  

ಗಣ್ಯರ ಭೇಟಿ :14/4/2022 ರಂದು ಆರಂಭವಾದ ಹೋರಾಟದ ವೇದಿಕೆಗೆ ಸಾಕಷ್ಟು ಗಣ್ಯರು ಬಂದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ, ಅವರಲ್ಲಿ ಮಾಜಿ ಸಚಿವರಾದ ಎಂ ಬಿ ಪಾಟೀಲ, ರಾಮಲಿಂಗಾರೆಡ್ಡಿ, ಎಸ್ ಆರ್ ಪಾಟೀಲ, ಅಜಯಕುಮಾರ ಸರನಾಯಕ, ಎಸ್ ಜೆ ನಂಜಯ್ಯನಮಠ, ಹಾಲಿ ಶಾಸಕರಾದ ಸಿದ್ದು ಸವದಿ, ಆನಂದ ನ್ಯಾಮಗೌಡ, ಸತೀಶ ಜಾರಕಿಹೊಳಿ, ಜೆ ಟಿ ಪಾಟೀಲ, ಶ್ರೀಕಾಂತ್ ಕುಲಕರ್ಣಿ, ಉಮಾಶ್ರೀ, ಆರ್ ಬಿ ತಿಮ್ಮಾಪುರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಪಿ ಸಿ ಗದ್ದಿಗೌಡರ, ಸಿ ಸಿ ಪಾಟೀಲ, ಈಶ್ವರ ಖಂಡ್ರೆ, ಎನ್ ರವಿಕುಮಾರ್, ಪಿ ಎಚ್ ಪೂಜಾರ, ವೀಣಾ ಕಾಶಪ್ಪನವರ, ಶ್ರೀಕಾಂತ್ ಕುಲಕರ್ಣಿ, ಕೇಶವ ಮೂರ್ತಿ ಸಂಗಮೇಶ ನಿರಾಣಿ, ಹಣಮಂತ ನಿರಾಣಿ, ರಾಜ ಸಭಾ ಸದಸ್ಯ ಈರಣ್ಣ ಕಡಾಡಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಕೆ ಟಿ ಗಂಗಾಧರ ಬಂದು ಈ ಪಟ್ಟಣ ತಾಲೂಕಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.  

ಮುಖ್ಯಮಂತ್ರಿ ಬಳಿ ನಿಯೋಗ : ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್ ಆರ್ ಬೋಮಾಯಿ ಅವರಿಗೆ ನಾಲ್ಕು ಬಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ, ಕಂದಾಯ ಸಚಿವ ಆರ್ ಅಶೋಕ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರ​‍್ಪ, ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ, ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ವೇದಿಕೆಗೆ ಬಾರದ ಉಪಮುಖ್ಯಮಂತ್ರಿ : ಹಲವಾರು ಸಲ ಇದೇ ಮಾರ್ಗವಾಗಿ ಹೋದರೂ ವೇದಿಕೆಯ ಸದಸ್ಯರು ಕರೆದರೂ ಬರದೇ ಹೋದ ರಾಜ್ಯದ ಉಪಮುಖ್ಯಮಂತ್ರಿಗಳಾದ ಮುಧೋಳ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋವಿಂದ ಕಾರಜೋಳವರು ಇನ್ನಾದರೂ ತಮ್ಮ ಆಸಕ್ತಿ ತೋರಿಸಿ ತಾಲೂಕು ಮಾಡಲು ಮುಂದಾಗುವರೆ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.  ಮೊದಲು ಮಹಾಲಿಂಗಪುರ ಮುಧೋಳ ಮತಕ್ಷೇತ್ರದಲ್ಲಿತ್ತು ಆಗ ನಗರದ ಮತದಾರರು ಅವರಿಗೆ ತೋರಿಸಿದ ಪ್ರೀತಿ ಅಪ್ಪಾರವಾಗಿದ್ದು, ಮುಧೋಳ ಕ್ಷೇತ್ರದಲ್ಲಿರುವರೆಗೂ ಕಾರಜೋಳರಿಗೂ ಮುನ್ನಡೆ ಕೊಟ್ಟಿದ್ದು, ಮಹಾಲಿಂಗಪುರ ಅದರ ಋಣ ತೀರಿಸುವ ಅವಕಾಶ ಒದಗಿ ಬಂದಿದು ಈ ತಾಲೂಕು ಘೋಷಣೆ ಮಾಡಿಸುವ ಮೂಲಕ ಋಣ ತೀರಿಸುವ ಜವಾಬ್ದಾರಿ ಕಾರಜೋಳರ ಮೇಲಿದೆ, 

ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ಸರಕಾರಗಳು ಸುಮಾರು ಐವತ್ತು ತಾಲೂಕುಗಳನ್ನು ತಮಗೆ ಬೇಕಾದ ನಗರಗಳನ್ನು  ಘೋಷಿಸಿವೆ, ಜಮಖಂಡಿ ತಾಲೂಕು ಒಡೆದು ಎರಡು ತಾಲೂಕುಗಳನ್ನು ಮಾಡಿವೆ, ಆದರೆ ಮುಧೋಳ ತಾಲೂಕ ಒಡೆದು ಯಾವುದೇ ತಾಲೂಕು ಮಾಡಿಲ್ಲ,ಆದ್ದರಿಂದ ಎಲ್ಲಾ ರೀತಿಯಿಂದಲೂ ಯೋಗ್ಯ ನಗರಕ್ಕೆ ನಿರಂತರ ಅನ್ಯಾಯ ಆಗಿದೆ,ಒಟ್ಟಾರೆಯಾಗಿ ಈ ಭಾಗದ ಜನರ ಒಕ್ಕೊರಲಿನ ಬೇಡಿಕೆಯಾದ ಸುಂದರ ವಾಣಿಜ್ಯ ನಗರ ಮಹಾಲಿಂಗಪುರ ತಾಲೂಕಾಗಬೇಕೆಂಬುದು, ತಕ್ಷಣ ಯಾವುದೇ ಅನುದಾನ ಕೊಡದೆ ಇದ್ದರೂ ತೊಂದರೆ ಇಲ್ಲ ಮುಂಬರುವ ಪೆಬ್ರುವರಿ ಬಜೆಟಿನಲ್ಲಿ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಗರವನ್ನು ತಾಲೂಕು ಕೇಂದ್ರ ಘೋಷಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಜನ ಮತ್ತೆ ಬೆಂಬಲನೀಡುವಂತೆ ಮಾಡುವರೆ ಎಂದು ಕಾಯ್ದುನೋಡಬೇಕಿದೆ. 


ಸುದ್ದಿ ಓದಿ