ಮುಂದಗೋಡ

ಅಡಿಕೆ ತೋಟಗಳ ಮೇಲೆ ಕಾಡು ಹಂದಿ ದಾಳಿ:ಹಾನಿ

ಅಡಿಕೆ ತೋಟಗಳ ಮೇಲೆ ಕಾಡು ಹಂದಿ ದಾಳಿ:ಹಾನಿ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ರೈತರ ಅಡಿಕೆ ತೋಟಗಳ ಮೇಲೆ ಕಾಡು ಹಂದಿಗಳು ದಾಳಿ ನಡೆಸಿ ಹಾನಿ ಉಂಟು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

ಗ್ರಾಮದ ಶಿವಲಿಂಗಪ್ಪ ಕಳಸಗೇರಿ ಎಂಬುವರ 5ಎಕರೆ ತೋಟದಲ್ಲಿ 2-3 ವರ್ಷದ 150 ಅಡಿಕೆ ಗಿಡಗಳನ್ನು ಹಾಗೂ ಪಕ್ಕದ ಬಸಪ್ಪ ಕಳಸಗೇರಿ ಅವರ 2 ಎಕರೆ ತೋಟದಲ್ಲಿ 25 ಗಿಡಗಳನ್ನು ಕಾಡು ಹಂದಿಗಳು ಕೆಡವಿ ತಿಂದು ನಾಶ ಪಡಿಸಿ ಹಾನಿ ಉಂಟು ಮಾಡಿವೆ. ಕಳೆದ ವರ್ಷವೂ ಇದೇ ವೇಳೆ ಕಾಡು ಹಂದಿಗಳು ತೋಟಗಳ ಮೇಲೆ ದಾಳಿ ನಡೆಸಿದ್ದವು. ಅಲ್ಲದೆ ಕೆಲವು ದಿನಗಳ ಹಿಂದೆ ಕಾಡಾನೆಯೊಂದು ಬಂದು ರೈತರ ಗದ್ದೆಗಳ ಬೆಳೆ ನಾಶ ಪಡಿಸಿತ್ತು. ಕಾಡು ಪ್ರಾಣಿಗಳು ಹೊಲ-ಗದ್ದೆ ಮತ್ತು ತೋಟಗಳಿಗೆ ಪ್ರವೇಶ ಮಾಡದಂತೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಾಜ ಗುಬ್ಬಕ್ಕನವರ, ಮಂಜು ಕೋಣನಕೇರಿ, ಗೌರೀಶ ಹರಿಜನ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ