ರಸ್ತೆಗಳ ಅಗಲೀಕರಣದಿಂದ ಪಟ್ಟಣದ ಆಂತರಿಕ ಸೌಂದರ್ಯ ಹೆಚ್ಚುತ್ತದೆ: ಯಲ್ಲನ್ನಗೌಡ ಪಾಟೀಲ್
ಮಹಾಲಿಂಗಪುರ 09: ರಸ್ತೆಗಳ ಅಗಲೀಕರಣದಿಂದಾಗಿ ಅಂಗಡಿಕಾರರ ವ್ಯಾಪಾರು ವಹಿವಾಟು ಮತ್ತು ಪಟ್ಟಣದ ಆಂತರಿಕ ಸೌಂದರ್ಯ ಹೆಚ್ಚುತ್ತದೆ ಎಂದು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಹೇಳಿದರು.
ಎಪಿಎಂಸಿ ಪ್ರದೇಶ ಬಲಭಾಗ ರಸ್ತೆ ಅಗಲೀಕರಣ ಕಾರ್ಯಕ್ಕೆ ಪುರಸಭೆ ವತಿಯಿಂದ ಶುಕ್ರವಾರ ಸರ್ವೆ ಕಾರ್ಯ ಆರಂಭಿಸಿ ಮಾತನಾಡಿದ ಅವರು, ನಾವು ಅಗತ್ಯ ರಸ್ತೆಯ ಜಾಗವನ್ನು ಮಾತ್ರ ವಶಪಡಿಸಿಕೊಂಡು ಮಾಲ್ಕಿ ಜಾಗೆಗಳಿಗೆ ಯಾವುದೇ ಧಕ್ಕೆ ಮಾಡುವುದಿಲ್ಲ.
ಈಗಾಗಲೇ ಮಹಾಲಿಂಗಪುರ ಪಟ್ಟಣ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದ್ದು, ತಕ್ಕಂತೆ ಅಂಗಡಿ ಮುಂಗಟ್ಟುಗಳ ಮುಂದೆ ಅಗತ್ಯ ಪಾಕಿಂರ್ಗ್ ವ್ಯವಸ್ಥೆಗೆ ಸ್ಥಳಾವಕಾಶ ಬಹಳ ಕಡಿಮೆ. ಈ ಕಾರಣ ವಾಹನ ಸವಾರರು, ಪಾದಚಾರಿಗಳು ಮತ್ತು ಖರೀದಿಗೆ ಬರುವ ಅಲ್ಲದೆ ಒಟ್ಟಿಗೆ ಎಲ್ಲ ಸ್ತರದ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಕಾರ್ಯ ದಶಕಗಳ ಹಿಂದೆಯೇ ನಡೆಯಬೇಕಾಗಿತ್ತು ಈಗ ಕಾಲ ಕೂಡಿ ಬಂದಿದೆ ಪ್ರತಿಯೊಬ್ಬರ ಸಹಕಾರ ಅಷ್ಟೇ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ಬಸವರಾಜ ಬುರುಡ, ರಾಜು ಗೌಡಪ್ಪಗೋಳ, ಸುನೀಲಗೌಡ ಪಾಟೀಲ್, ಸದಾಶಿವ ಗೊಬ್ಬರದ, ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಎಂ ಎಸ್ ಮುಗಳಖೋಡ, ಎಂ ಡಿ. ಮಹಾಲಿಂಗ, ಮಹಾಲಿಂಗಪ್ಪ ಗಸ್ತಿ, ಮಹಾಲಿಂಗಪ್ಪ ಮಾಂಗ, ಕುಮಾರ ಮಾಂಗ ಮುಂತಾದವರಿದ್ದರು.
ಇತ್ತಿಚೆಗೆ ಎಪಿಎಂಸಿ ರಸ್ತೆಯ ಎಡಭಾಗ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದ್ದು,ಬಲಭಾಗ ಶುಕ್ರವಾರ ಮುಂಜಾನೆಯಿಂದಲೇ ಪುರಸಭೆ ಸಿಬ್ಬಂದಿ ಮಾಲ್ಕಿ ಜಾಗೆಗಳ ಹದ್ದುಬಸ್ತ ಮಾಡಿ, ಅತಿಕ್ರಮಣ ಪ್ರದೇಶ ತೆರುವಿಗೆ ಅಂಗಡಿಕಾರರಿಗೆ ಮೂರು ದಿನಗಳ ಕಾಲಾವಕಾಶ ಕೊಡಲಾಗಿದೆ.ತದನಂತರ ಇನ್ನೆರಡು ದಿನಗಳಲ್ಲಿ ರಬಕವಿ ರಸ್ತೆ ಜತ್ತ -ಜಾಂಬೋಟಿ ರಾಜ್ಯ ಹೆದ್ದಾರಿ ಚನ್ನಮ್ಮ ವೃತ್ತದಿಂದ ಮಡ್ಡಿ ಮಹಾಲಿಂಗೇಶ್ವರ ದೇವಸ್ಥಾನ ವರೆಗಿನ ಎರಡೂ ಬದಿ ರಸ್ತೆಗಳ ಸರ್ವೆ ಕಾರ್ಯ ಆರಂಭವಾಗಲಿದೆ.
* ಈರಣ್ಣ ದಡ್ಡಿ, ಮುಖ್ಯಾಧಿಕಾರಿಗಳು ಮಹಾಲಿಂಗಪುರ.