ರಾಷ್ಟ್ರೀಯ

ತಾಜ್ ಮಹಲ್ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?: ಉತ್ತರ ಪ್ರದೇಶ ಸಕರ್ಾರಕ್ಕೆ 'ಸುಪ್ರೀಂ' ತರಾಟೆ

ತಾಜ್ ಮಹಲ್ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?: ಉತ್ತರ ಪ್ರದೇಶ ಸಕರ್ಾರಕ್ಕೆ 'ಸುಪ್ರೀಂ' ತರಾಟೆ



ನವದೆಹಲಿ: ಯುನೆಸ್ಕೊ ವಿಶ್ವ ಪರಂಪರೆ ತಾಣವಾದ ತಾಜ್ ಮಹಲ್ ನ್ನು ಕಾಪಾಡುವಲ್ಲಿ ಉತ್ತರ ಪ್ರದೇಶ ಸಕರ್ಾರ ವಿಫಲವಾಗಿದೆ ಎಂದು ಸುಪ್ರೀಂ ಕೋಟರ್್ ತೀವ್ರ ತರಾಟೆಗೆ ತೆಗೆದುಕೊಂಡಿದೆ. 

ತಾಜ್ ಮಹಲ್ ನ ಉಸ್ತುವಾರಿ ಯಾರದ್ದು ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ, ಇಲ್ಲಿ ಎಡಗೈ ಏನು ಮಾಡುತ್ತಿದೆ ಎಂದು ಬಲಗೈಗೆ ಗೊತ್ತಾಗುವುದಿಲ್ಲ, ಇದು ಅಚ್ಚರಿ ಉಂಟು ಮಾಡುತ್ತಿದೆ, 1996ರಲ್ಲಿ ತಾಜ್ ಟ್ರಪೆಝಿಯಮ್ ವಲಯ ಸ್ಥಾಪನೆ ಮಾಡಿದ ನಂತರ ತಾಜ್ ಮಹಲ್ ನ್ನು ರಕ್ಷಿಸುವ ಕೆಲಸವಾಗಿಲ್ಲ ಎಂದು ಛೀಮಾರಿ ಹಾಕಿದೆ. 

ಉತ್ತರ ಪ್ರದೇಶ ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ, ತಾಜ್ ಮಹಲ್ ಟ್ರಾಪಜಿಯಂಗೆ ಸಂಬಂಧಿಸಿದಂತೆ ವಿಷನ್ ಡಾಕ್ಯುಮೆಂಟ್ ನ ಕರಡು ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಕರಡು ವರದಿ ಏಕೆ ರಚಿಸಿದ್ದೀರಿ? ಅದನ್ನು ನಾವು ಸರಿ ಮಾಡಬೇಕೆ, ಸರಿಮಾಡಬೇಕಾಗಿರುವವರು ಯಾರು ಎಂದು ಕೇಳಿದೆ. 

ಮೊದಲು ಪರಿಸರ ಸಚಿವಾಲಯ ಅಫಿಡವಿಟ್ಟು ಸಲ್ಲಿಸಿತು, ನಂತರ ಎಎಸ್ಐ, ನಂತರ ಉತ್ತರ ಪ್ರದೇಶ ಸಕರ್ಾರ ಸಲ್ಲಿಸಿದೆ, ಇಲ್ಲಿ ಏನು ನಡೆಯುತ್ತಿದೆ ಎಂದು ಕೇಳಿರುವ ನ್ಯಾಯಮೂತರ್ಿ ಮದನ್ ಭೀಮರಾವ್ ನೇತೃತ್ವದ ವಿಭಾಗೀಯ ಪೀಠ, ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದ ಮರು ಅಭಿವೃದ್ಧಿ ಮತ್ತು ರಕ್ಷಣೆ ಮಾಡಬೇಕೆಂದು ತಾಖೀತು ಮಾಡಿದೆ. 

ತಾಜ್ ಮಹಲ್ ನಂಥ ವಿಶ್ವಪರಂಪರೆ ತಾಣದ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ ನ್ಯಾಯಮೂತರ್ಿ ಲೋಕೂರ್, ತಾಜ್ ಮಹಲ್ ನ ಉಸ್ತುವಾರಿಯನ್ನು ಯಾವುದಾದರೂ ಒಂದು ಪ್ರಾಧಿಕಾರ ನೋಡಿಕೊಳ್ಳಬೇಕು ಎಂದು ಹೇಳಿದರು. 

ಉತ್ತರ ಪ್ರದೇಶ ಸಕರ್ಾರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಅಟೊನರ್ಿ ಜನರಲ್ ಕೆ ಕೆ ವೇಣುಗೋಪಾಲ್, ತಾಜ್ ಟ್ರಾಪೆಜೊಯಮ್ ವಲಯದಲ್ಲಿ ಕೈಗಾರಿಕಗಳ ಮರು ಸ್ಥಳಾಂತರದ ಜವಾಬ್ದಾರಿ ಎಎಸ್ಐಯದ್ದು ಅಲ್ಲ ಎಂಬ ವರದಿಯನ್ನು ಸುಪ್ರೀಂ ಕೋಟರ್್ ಗೆ ಸಲ್ಲಿಸಿದರು. 

ಕಳೆದ 24ರಂದು ಸುಪ್ರೀಂ ಕೋಟರ್್ ಗೆ ಕರಡು ವಿಷನ್ ದಾಖಲೆಗಳನ್ನು ಸಲ್ಲಿಸಿದ್ದ ಉತ್ತರ ಪ್ರದೇಶ ಸಕರ್ಾರ ವಿಶ್ವಪರಂಪರೆ ತಾಣವನ್ನು ರಕ್ಷಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಸಕರ್ಾರದ ಉದ್ದೇಶಿತ ಕರಡು ವಿಷನ್ ದಾಖಲೆಯಲ್ಲಿ, ತಾಜ್ ಮಹಲ್ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಯನ್ನು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹೇಳಿತ್ತು. ಯಮುನಾ ನದಿ ತೀರದಲ್ಲಿ ನಿಮರ್ಾಣ ಚಟುವಟಿಕೆಗಳಿಗೆ ನಿಷೇಧ ಮತ್ತು ಉತ್ತಮ ಸಂಚಾರ ನಿರ್ವಹಣೆ ಮಾಡುವುದಾಗಿ ಕೂಡ ಹೇಳಿತ್ತು. 

ಸುದ್ದಿ ಓದಿ