ಮಹಲಿಂಗಪುರ

ಅಪಘಾತದಲ್ಲಿ ಸತ್ತನೇಂದು ಊಹಿಸಿದ ವ್ಯಕ್ತಿ ಜೀವಂತವಾದಾಗ......

ಅಪಘಾತದಲ್ಲಿ ಸತ್ತನೇಂದು ಊಹಿಸಿದ ವ್ಯಕ್ತಿ ಜೀವಂತವಾದಾಗ......

ಮಹಾಲಿಂಗಪುರ ೦೩: ಬೈಕ್ ಹಾಗೂ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ  ಯುವಕ   ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಗಾಯಾಳು ವ್ಯಕ್ತಿಯ ಶರೀರದಲ್ಲಿ ಜೀವ ಸಂಚಲನ ಉಂಟಾಗಿ ಜನರಲ್ಲಿ ವಿಸ್ಮಯ ಮೂಡಿಸಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

ಸ್ಥಳೀಯ ಸಿದ್ಧ ಉಡುಪು ತಯಾರಿಕಾ ಘಟಕದ ಮಾಲೀಕ ಶಂಕರ ಷಣ್ಮುಖಪ್ಪ ಗೊಂಬಿ (27) ಭಾನುವಾರ ರಾತ್ರಿ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರತರವಾದ ಪೆಟ್ಟಿನಿಂದಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಕಾರಣ ಕುಟುಂಬಸ್ಥರು ಆತನನ್ನು ಮರಳಿ ಮಹಾಲಿಂಗಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಆಗ ನಿಷ್ಕ್ರಿಯ ಶರೀರವನ್ನು ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಕೊಠಡಿಯಲ್ಲಿ ಆತನ ಕೈಕಾಲು ಅಲುಗಾಡುವ ದೃಶ್ಯವನ್ನು ಹಿರಿಯ ವೈದ್ಯರೊಬ್ಬರು ಕಂಡು ಹೆಚ್ಚಿನ ಚಿಕಿತ್ಸೆಗೆ  ಶಿಫಾರಸು ಮಾಡಿದ್ದಾರೆ. ಹರ್ಷಗೊಂಡ ಕುಟುಂಬಸ್ಥರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಗೆಳೆಯರು ಗಾಯಾಳು ಶಂಕರನನ್ನು ಪಟ್ಟಣದ ವೆಂಕಟೇಶ ಆಸ್ಪತ್ರೆಗೆ ಪುನಃ ದಾಖಲಿಸಿ ಚಿಕಿತ್ಸೆ ಕೊಡಿಸುತಿದ್ದಾರೆ.          

ಪವಾಡ ಎನ್ನುವ ಮಾದರಿಯಲ್ಲಿ ಯುವಕ ಶಂಕರನ ಸ್ಥಿತಿ ಉತ್ತಮಗೊಳ್ಳುತ್ತಿದ್ದು, ವೈದ್ಯಕೀಯ ವ್ಯವಸ್ಥೆಗೂ ಇದು ಸವಾಲಾಗುವಂತೆ ಪರಿಣಮಿಸಿದೆ. ಅಪಘಾತದಲ್ಲಿ ತೀವ್ರ ರಕ್ತಸ್ರಾವವಾದ ಕಾರಣ ಬೆಳಗಾವಿಯ ವೈದ್ಯರು ವೆಂಟಿಲೇಟರ್ ತೆಗೆದರೆ ಅಸುನೀಗುತ್ತಾನೆ ಎಂದರೂ ವೆಂಟಿಲೇಟರ್ ತೆಗೆದರೂ ನಾಡಿ ಮಿಡಿತ ಹೆಚ್ಚಾಗಿದ್ದು ನೋಡಿದರೆ ಕೊಲ್ಲುವವನಗಿಂತಲೂ ಕಾಯುವವ ಲೇಸು ಎನ್ನುವುದು ಸಾಬೀತಾಗಿದೆ. 

ಪ್ರತಿವರ್ಷ ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ, ಉಚಿತ ವಸ್ತ್ರದಾನ, ವಿವಿಧ ಕಾರ್ಯಕ್ರಮ, ಕ್ರೀಡೆ, ಬಡವರಿಗೆ ಅವರ ತಂದೆಯಂತೆ ಧನ ಸಹಾಯ ಮಾಡುತ್ತಿದ್ದರು. ಇದರ ಜೊತೆಗೆ ಕೊರೋನಾ ಸೋಂಕಿತರಿಗಾಗಿ ಸುಮಾರು 3 ಸಾವಿರ ಮಾಸ್ಕ್ಗಳನ್ನು ಉಚಿತವಾಗಿ ನೀಡಿದ್ದಾನೆ. 

ಶಾಸಕ ಸಿದ್ದು ಸವದಿಯವರಲ್ಲದೆ ಅಪಾರ ಪ್ರಮಾಣದ ಗೆಳೆಯರ ಬಳಗವು ಭೇಟಿ ನೀಡಿ ಯುವಕ ಶಂಕರನ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಊಹಾಪೋಹಗಳೇನೂ ನಡೆದಿರುವುದಿಲ್ಲ:

ಶಂಕರ್ಷ ಣ್ಮುಖ ಗೊಂಬಿ ಈತ ನನ್ನ ಸಹೋದರನ ಮಗನಾಗಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಆದೇಶದಂತೆ ಮರಳಿ ಮಹಾಲಿಂಗಪುರಕ್ಕೆ ತರಲಾಗಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವಂತೆ ಊಹಾಪೋಹಗಳೇನೂ ನಡೆದಿರುವುದಿಲ್ಲ. ಹೆಚ್ಚಿನ ತಪಾಸಣೆ ನಡೆಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಂದ ಅಥವಾ ಸಿಬ್ಬಂದಿಗಳಿಂದಾಗಲಿ ಈ ಪ್ರಕರಣದಲ್ಲಿ ಯಾವುದೇ ಪ್ರಮಾದವಾಗಿಲ್ಲ. ಕಾನೂನಿನ ಕೆಲ ನಿಯಮಗಳ ಪ್ರಕಾರ ನಾವು ನಡೆದುಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಸೇರಿದ ಅವನ ಗೆಳೆಯರ ಬಳಗ ಶಂಕರನ ಶರೀರದಲ್ಲಿ ಚೇತರಿಕೆ ಕಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವನನ್ನು ಬದುಕಿಸುವ ಪ್ರಯತ್ನ ನಡೆಸಿದ್ದಾರೆ .

ಜಿ.ಎಸ್. ಗೊಂಬಿ 

ಗಾಯಾಳು ಶಂಕರ್ ಗೊಂಬಿ ಚಿಕ್ಕಪ್ಪ.

ಸುದ್ದಿ ಓದಿ