ಅಂತರರಾಷ್ಟ್ರೀಯ

ಬ್ರಿಟನ್ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಸೋತ ಭಾರತೀಯ ಮೂಲದ ರಿಷಿ ಸುನಕ್ ಹೇಳಿದ್ದೇನು?

ಬ್ರಿಟನ್ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಸೋತ ಭಾರತೀಯ ಮೂಲದ ರಿಷಿ ಸುನಕ್ ಹೇಳಿದ್ದೇನು?

ಲಂಡನ್: ಸೆಪ್ಟೆಂಬರ್ 05 : ಬ್ರಿಟನ್ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಸೋತ ರಿಷಿ ಸುನಕ್,  ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿ ನಾಯಕತ್ವದ ಸ್ಪರ್ಧೆಯಲ್ಲಿ ಗೆದ್ದ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅವರ ಹಿಂದೆ ಒಂದಾಗುವಂತೆ ರಿಷಿ ಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಕೋರಿದ್ದಾರೆ.

42 ವರ್ಷದ ರಿಷಿ ಸುನಕ್  ಅವರ ಸೋಲಿನ ನಂತರ, ತನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಅಭಿಯಾನದಲ್ಲಿ ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಕನ್ಸರ್ವೇಟಿವ್ಸ್ ಒಂದೇ ಕುಟುಂಬ ಎಂಬುದನ್ನು ನಾನು ಹೇಳುತ್ತಲೇ ಬಂದಿದ್ದೇನೆ. ನಾವು ಈಗ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ಹಿಂದೆ ಒಂದಾಗಿದ್ದೇವೆ. ಅವರು ಕಷ್ಟದ ಸಮಯದಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಒಟ್ಟು 1,72,437 ಅರ್ಹ ಮತದಾರರಿಂದ 654 ತಿರಸ್ಕೃತ ಮತಗಳೊಂದಿಗೆ 82.6 ಶೇಕಡಾ ಹೆಚ್ಚಿನ ಮತದಾನದೊಂದಿಗೆ ಚುನಾವಣೆಯಲ್ಲಿ ಸುನಕ್ ಅವರು 60,399 ಮತಗಳನ್ನು ಪಡೆದರೆ, ಟ್ರಸ್ 81,326 ಮತಗಳನ್ನು ಪಡೆದರು.

47 ವರ್ಷದ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ.

ಭಾನುವಾರ ಕೂಡ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಸೋತರೆ, ಮುಂದಿನ ಸರ್ಕಾರವನ್ನು ಬೆಂಬಲಿಸುವುದು ಅವರ ಕೆಲಸ ಎಂದು ಹೇಳಿದ್ದರು.

ಸುದ್ದಿ ಓದಿ