ವೇಮನರು ಶ್ರೇಷ್ಠ ದಾರ್ಶನಿಕರು: ಯಾದವಾಡ
ರಾಮದುರ್ಗ 19: ವೇಮನರು ಶ್ರೇಷ್ಠ ದಾರ್ಶನಿಕರು, ಮನುಕುಲದ ಏಳಿಗೆಗೆ ಶ್ರಮಿಸಿದ ವೇಮನರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.
ತಾಲೂಕ ಆಡಳಿತ ವತಿಯಿಂದಾ ಮಿನಿವಿಧಾನಸೌಧದಲ್ಲಿ ಹಾಗೂ ತೋರಣಗಟ್ಟಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪ ಏರ್ಪಡಿಸಿದ ವೇಮನರ 609 ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ವೇಮನರ ಪದ್ಯಗಳು ವಿಶ್ವವ್ಯಾಪಿ ತಮಿಳು, ಮಲಿಯಾಳ, ಸಂಸ್ಕ್ರತ ಮತ್ತು ಕನ್ನಡ ಭಾಷೆಗಳಿಗೆ ಅನುವಾದಗೊಂಡು ಬೃಹತ ಸಂಪುಟಗಳಲ್ಲಿ ಪ್ರಕಟಗೊಂಡಿವೆ ಎಂದು ನುಡಿದರು. ಮಹಾನ ಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಶ್ರದ್ದೆ ಮತ್ತು ಭಕ್ತಗೆ ಮೆಚ್ಚಿದ ಮಲ್ಲಿಕಾರ್ಜುನ ದಿವ್ಯದರ್ಶನ ನೀಡದ್ದು ಇತಿಹಾಸ ಅತಂಹ ಸಾಧ್ವಿಯ ಗುಣಗಳನ್ನು ಮಹಿಳೆಯರು ಅನುಸರಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ಹೇಳಿದರು.
ಗದಗ ಹೇಮರಡ್ಡಿ ಮಲ್ಲಮ್ಮ ಜಿಲ್ಲಾ ಯುವ ಜಾಗೃತ ವೇದಿಕೆ ಅಧ್ಯಕ್ಷ ಅನೀಲಕುಮಾರ ತೆಗ್ಗಿನಕೇರಿ ವೇಮನ ಜೀವನ ಚರಿತ್ರ ಕುರಿತು ಉಪನ್ಯಾಸ ನೀಡಿದರು. ಢವಳೇಶ್ವರ ಮಠ ಹರ್ಲಾಪೂರ ರೇಣುಕ ಶೀವಾಚಾರ್ಯ ಸ್ವಾಮಿಜಿ, ಸಿದ್ದಾರೋಢಮಠ ರಾಮದುರ್ಗದ ಜಗದಾತ್ಮಾನಂದ ಸ್ವಾಮಿಜಿ ಸಮಾರಂಭದ ಸಾನಿಧ್ಯವಹಿಸಿದ್ದರು, ಜಿಲ್ಲಾ ಪಂಚಾಯತ ಸದಸ್ಯ ಮಾರುತಿ ತುಪ್ಪದ, ತಾಪಂ ಸದಸ್ಯ ರೇಣುಕಾ ಸಿಂಗಾರಗೊಪ್ಪ, ಯಲ್ಲಪ್ಪ ಶಿದ್ದರಡ್ಡಿ, ತಹಶೀಲ್ದಾರ ಗೀರಿಶ ಸ್ವಾದಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಶಾಲ ಕರ್ಕಿ, ರಡ್ಡಿ ಸಮಾಜದ ಮುಖಂಡ ಡಾ. ಕೆ ವಿ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.