ಅಂಚೆ ಮತದಾನ ಸಂಗ್ರಹಿಸುವ ಸಿಬ್ಬಂದಿಗಳಿಗೆ ರಂಗೋಲಿ ಹಾಕಿ ಸ್ವಾಗತ
ಲೋಕದರ್ಶನ ವರದಿ
ಯಲಬುರ್ಗಾ 02: ವಿಧಾನಸಭಾ-63 ವ್ಯಾಪ್ತಿಯ ಕುಕನೂರ ಪಟ್ಟಣದ ಸಂಜಯನಗರ ನಗರ ಇಂದು ಅಂಚೆ ಮತದಾನ ಪಡೆಯಲು ತೆರಳಿದ ಅಧಿಕಾರಿಗಳನ್ನು ರಂಗೋಲಿ ಹಾಕಿ ಸ್ವಾಗತ ಗೈದ ಅನುಶ್ರೀ ಮತ್ತ ತನುಶ್ರೀ ತಂದೆ ವಿಶ್ವನಾಥ ಮೇಟಿ ಭಾರತ ಚುನಾವಣೆ ಆಯೋಗ ಮೇ-10 ರಂದು ಜರುಗುವ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಮನೆಯಲ್ಲಿಯೇ ಕುಳಿತು ಮತ ಚಲಾಯಿಸಲು ವಿಶೇಷ ಅವಕಾಶ ಕಲ್ಪಿಸಿದ್ದು, ಅದರಂತೆ ಇಂದು ಕುಕನೂರು ಪಟ್ಟಣದ ಸಂಜಯ ನಗರದಲ್ಲಿ ಅಂಚೆ ಮತ ಸಂಗ್ರಹಿಸಲು ತೆರಳಿದ ಸಿಬ್ಬಂದಿಗಳನ್ನು ರಂಗೋಲಿ ಹಾಕಿ, ಸಿಹಿ ಮತ್ತು ಪಾನಕ ನೀಡಿ ಸ್ವಾಗತಿಸಿದ್ದು ಅಂಚೆ ಮತ ಸಂಗ್ರಹಿಸಲು ತೆರಳಿದ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದರು. ಸ್ಥಳದಲ್ಲಿ ಸೆಕ್ಟರ್ ಆಫೀಸರ್ ಮಾರುತಿ ಲಕಮಾಪೂರ, ಪಿ.ಆರ್.ಓ, ಮತ್ತು ಎ.ಪಿ.ಆರ್.ಓ, ಮೈಕ್ರೋ ಆಬ್ಜರ್ವರ್, ವಿಡಿಯೋ ಗ್ರಾಫರ್, ಬಿ.ಎಲ್.ಓ ಗಿರಿಜಾ ಹಳ್ಳಿಕೇರಿ, ಶಾಂತಾ ಶಿವಶಿಂಪರ್, ಪೋಲೀಸ್ ಇಲಾಖೆಯಿಂದ ಅಧಿಕಾರಿಗಳು ಅನುಶ್ರೀ ಮತ್ತು ತನುಶ್ರೀ ತಂದೆ ವಿಶ್ವನಾಥ ಮೇಟಿ ಬಾಲಕಿಯರು ಹಾಜರಿದ್ದರು.