ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ

ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ

qರಾಣಿಬೆನ್ನೂರ 01:  ಕೇಂದ್ರ ಸರ್ಕಾರದ ಆಶಯದಂತೆ 2025ರ ವೇಳೆಗೆ ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ದಿಶೆಯಲ್ಲಿ ಶಕ್ತಿಮೀರಿ ಶ್ರಮಿಸುವುದು ಅವಶ್ಯವಾಗಿದೆ ಎಂದು ಸ್ಥಳೀಯ ಸೆಂಟ್‍ಜಾನ್ ಚರ್ಚ್‍ನ ಪಾಸ್ಟರ್ ರೆವೆರೆಂಡ್ ವಿಜಯರಾಜ ಜಡಗಲ್ ಹೇಳಿದರು.

ಇಲ್ಲಿಯ ಸಿದ್ದೇಶ್ವರ ನಗರದ ಸೆಂಟ್‍ಜಾನ್ ಚರ್ಚ್‍ನಲ್ಲಿ ರವಿವಾರ ಜಿಲ್ಲಾ ಕ್ಷಯರೋಗ ನಿಯಂತ್ರಣದ ಆಶ್ರಯದಲ್ಲಿ ಕ್ಷಯ ರೋಗದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷಯರೋಗಕ್ಕೆ ಭಯಪಡುವ ಅಗತ್ಯವಿಲ್ಲ. ಈ ರೋಗಕ್ಕೆ ಪರಿಣಾಮಕಾರಿ ಔಷಧಿಗಳು ಲಭ್ಯವಿದ್ದು, ವೈದ್ಯರ ಸಲಹೆ ಮೇರೆಗೆ ಔಷಧಿಗಳ ಸೇವೆನೆ ಮಾಡುವ ಮೂಲಕ ಕ್ಷಯರೋಗವನ್ನು ಗುಣಪಡಿಸಬಹುದಾಗಿದೆ ಎಂದರು.

ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ ಪಾಟೀಲ ಮಾತನಾಡಿ, ಕ್ಷಯರೋಗವಿರುವ ವ್ಯಕ್ತಿ ಕೆಮ್ಮಿದಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಾರಣ ಕೆಮ್ಮುವಾಗ ಕರವಸ್ತ್ರ ಬಳಕೆ ಮಾಡಬೇಕು. 2ವಾರಕ್ಕೂ ಹೆಚ್ಚು ಕಫ ಸಮೇತ ಕೆಮ್ಮು ಕಾಣಿಸಿಕೊಂಡರೆ ಕೂಡಲೇ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ನಗರ ಕ್ಷಯರೋಗ ಆರೋಗ್ಯ ಸಂದರ್ಶಕ ಗೀರಿಶ ಮುರನಾಳ ಅವರು ಕ್ಷಯರೋಗ ಹರಡುವ ಕುರಿತು ಮತ್ತು ಅದನ್ನು ತಡೆಗಟ್ಟುವ ಕುರಿತು ವಿವರಿಸಿದರು. ಈ ಸಮಯದಲ್ಲಿ ವೈ.ಎಂ. ನಡಕಟ್ಟಿನ, ಸುರೇಶ ಬಿದರಿ, ಸುಂದರಮ್ಮ, ಲಲಿತಾ, ನೇತ್ರಾವತಿ ಸೇರಿದಂತೆ ಇತರರಿದ್ದರು.

ಸುದ್ದಿ ಓದಿ