ಎಲಬುರ್ಗ

ಗ್ರಾಮಗಳಲ್ಲಿ ಅನೈರ್ಮಲ್ಯ: ಕೊಳಚೆ ನೀರು ನಿಂತು ಗಬ್ಬು ವಾಸನೆ

ಗ್ರಾಮಗಳಲ್ಲಿ ಅನೈರ್ಮಲ್ಯ: ಕೊಳಚೆ ನೀರು ನಿಂತು ಗಬ್ಬು ವಾಸನೆ

ಯಲಬುರ್ಗಾ 06: ಸರ್ಕಾರ ಗ್ರಾಮಗಳ ಸಮಗ್ರ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆದರೆ ಆ ಯೋಜನೆಗಳು ಸರಿಯಾಗಿ ಸದ್ಬಳಕೆಯಾಗದಿದ್ದರೆ ಗ್ರಾಮಗಳ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ. ಎನ್ನುವುದಕ್ಕೆ ತಾಲೂಕಿನ ಸಂಕನೂರು ಗ್ರಾಮದಲ್ಲಿ ನೈರ್ಮಲ್ಯ ಎನ್ನುವುದು ಮರೀಚಿಕೆಯಾಗಿದ್ದು, ಗ್ರಾಮವೇ ಸಾಕ್ಷಿ.

ಯಲಬುರ್ಗಾ ಮಾರ್ಗದಿಂದ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಅಕ್ಕಪಕ್ಕದಲ್ಲಿ ನಿಂತಿರುವ ಸಾಕಷ್ಟು ಗಲಿಜು ನೀರು ನಮ್ಮನ್ನು ಸ್ವಾಗತಿಸುವಂತೆ ಆಗುತ್ತೆ. ಅಲ್ಲದೇ ಸೂಡಿ ಗ್ರಾಮದಿಂದ ಸಂಕನೂರು ಗ್ರಾಮಕ್ಕೆ ಬಂದರೆ ಸಾಕು ಅಲ್ಲಿ ಸಹ ಕಲ್ಮಶಗೊಂಡಿರುವ ನೀರು ಸಂಗ್ರಹವಾಗಿದ್ದಾವೆ ಎನ್ನಬಹುದು. ಇದಕ್ಕೆ ಸರಿಯಾಗಿ ಚರಂಡಿಗಳು ಇಲ್ಲದಿರುವದರಿಂದ ದುರ್ವಾಸನೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ರೋಗಗಳ ಭೀತಿಯಲ್ಲಿ ಜೀವಸುವಂತಾಗಿದೆ.

ಕಲ್ಮಶ ನೀರು ಸಂಗ್ರಹ,ಗಬ್ಬು ವಾಸನೆ: ಕ್ರಾಸ್‍ನಿಂದ ಸಂಕನೂರು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬಂದರೆ ಗ್ರಾಮದ ಹತ್ತಿರ ಇರುವ ಮಸೀದಿ ಮತ್ತು ಐತಿಹಾಸಿಕ ಪುರಾತನ ಕಾಲದ ಮಳೇಲೇಶ್ವರ ದೇವಸ್ಥಾನ ಇದೆ. ಇದರ ಅಕ್ಕ ಪಕ್ಕದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಇರುವದರಿಂದ ತಗ್ಗು ಪ್ರದೇಶ  ಸುತ್ತಲು ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ದುರ್ವಾಸನೆ ಬರುತ್ತಿದೆ. ಇಡಿ ಪ್ರದೇಶ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. 

ಸೂಡಿ ಗ್ರಾಮದಿಂದ ಬರುವ ಮುಖ್ಯ ರಸ್ತೆ ಪಕ್ಕದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರವಂತೂ ಹೇಳತೀರದಷ್ಟು ಕೊಳಚೆ ನೀರು ಸಂಗ್ರಹವಾಗಿದ್ದರಿಂದ ಪಕ್ಕದಲ್ಲಿರುವ ಶಾಲಾ ಮಕ್ಕಳು ದುರ್ವಾಸನೆ ಸೇವಿಸುವಂತದ್ದಾಗಿದೆ. ಶಾಲೆ ಪಕ್ಕದಲ್ಲಿ ಸರಿಯಾಗಿ ರಸ್ತೆ ನಿರ್ಮಾಣವಾಗದೆ ಇರುವದು ಸೇರಿ ಅಲ್ಲಿ ಮುಖ್ಯವಾಗಿ ಚರಂಡಿ ವ್ಯವಸ್ಥೆ ಕೂಡಾ ಕಲ್ಪಿಸಿಲ್ಲವಾದ್ದರಿಂದ ಮಕ್ಕಳು ದಿನನಿತ್ಯ ಕೊಳಚೆ ನೀರು ದಾಟಿ ಬರುವಂತಾ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಸಂಕನೂರು ಗ್ರಾಮಕ್ಕೆ ಹೋಗಬೇಕಾದರೆ ಮೂಗು ಮುಚ್ಚಿಕೊಳ್ಳಿ ಊರು ಬಂತು ಎನ್ನುವಂತಾಗಿದೆ. ಅದ್ದರಿಂದ ಸಂಬಂಧಿಸಿದ ಗ್ರಾಪಂ ಅಡಳಿತ ವರ್ಗ, ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸಂಗ್ರಹವಾಗಿರುವ ಕೊಳಚೆ ನೀರು ಸರಿಯಾಗಿ ಹೋಗುವಂತಗಲು ಅಲ್ಲಿ ಚರಂಡಿ ನಿರ್ಮಾಣ ಮಾಡುವಲ್ಲಿ ಮುಂದಾಗುವರೇ ಕಾದು ನೋಡಬೇಕು.

ಗ್ರಾಮದ ಪ್ರಮುಖ ರಸ್ತೆಯಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವದರಿಂದ ಕೊಳಚೆ ನೀರು ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದು. ಕೂಡಲೇ ಅಲ್ಲಿ ಚರಂಡಿ ನಿರ್ಮಾಣ ಮಾಡಲು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದೇವೆ.

ಶಿವರಾಜ ನಿಡಶೇಸಿ

ಪಿಡಿಓ ಗ್ರಾಪಂ ಸಂಕನೂರು

ಸುದ್ದಿ ಓದಿ