ಮಕ್ಕಳನ್ನು ನಸುಕಿನಲ್ಲಿ ಎಬ್ಬಿಸಿ ಓದಿಸಿ: ಡಾ.ಎ.ಬಿ.ಇರಾಜ
Wake up children at dawn and read: Dr. A.B. Iraja
ತಾಳಿಕೋಟೆ 04: ಪೂರ್ವ ಸಿದ್ಧತಾ ಪರೀಕ್ಷೆ ಸರಣಿ ಸೋಮವಾರದಂದು ಆರಂಭಗೊಳ್ಳಲಿದೆ, ಮಕ್ಕಳನ್ನು ನಸುಕಿನಲ್ಲಿ ಎಬ್ಬಿಸಿ ಓದಿಸಿ. ಈಗಾಗಲೇ ಪಾಠ ಬೋಧನೆ ಮುಗಿದಿದ್ದು ಮತ್ತೊಮ್ಮ ತಿಳಿಯದೆ ಉಳಿದ ಪಾಠಗಳನ್ನು ಮತ್ತೊಮ್ಮ ಬೊಧಿಸಲಾಗುತ್ತಿದೆ ಹೀಗಾಗಿ ಮಕ್ಕಳನ್ನು ಶಾಲೆ ಬಿಡಿಸಿ ಮದುವೆ ಜಾತ್ರೆಗೆಂದು ಕರೆದೊಯ್ಯಬೇಡಿ ಎಂದು ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ ಪಾಲಕರಿಗೆ ತಿಳಿ ಹೇಳಿದರು.
ಅವರು ಪಟ್ಟಣದ ಎಸ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹತ್ತನೆ ವರ್ಗದ ಗುರುಮಾತೆ ಪಿ.ಬಿ ದೇಶಮುಖ ಮಾತನಾಡುತ್ತಾ ಪಾಲಕರು ಶಿಕ್ಷಕರು ಕೂಡಿ ಮಕ್ಕಳ ಅಭ್ಯಾಸದ ಕಡೆಗೆ ಗಮನವನ್ನು ಹರಿಸಬೇಕು. ಆದರೆ ಪಾಲಕರ ಸಭೆಗೆ ಹಾಜರಾಗದೆ ತಾತ್ಸಾರ ಭಾವನೆ ತೋರುವ ಪಾಲಕರಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಶಿಕ್ಷಕ ಎಮ್.ಎಮ್.ಕಾಂಬಳೆ ನಿರೂಪಿಸಿದರು. ವಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 