ಬಿಎಲ್ಒಗಳಿಗೆ ಮತದಾರರ ಮಾಹಿತಿ ಹಂಚಿಕೆಯ ಸಭೆ
ಲೋಕದರ್ಶನ ವರದಿ
ಯಲಬುರ್ಗಾ 03: ಮೇ 10 ರಂದು ನಡೆಯಲಿರುವ 63.ವಿಧಾನಸಭಾ ಚುನಾವಣೆಯಲ್ಲಿ ಬಿಎಲ್ಒರವರು ತಮಗೆ ಕೊಟ್ಟಿರುವ ಭಾವಚಿತ್ರವಿರುವ ಮತದಾರರ ಮಾಹಿತಿ ಚೀಟಿಯನ್ನು ಮನೆಯ ಮುಖ್ಯಸ್ಥರಿಗೆ ಹಂಚಿಕೆ ಮಾಡಬೇಕು ಎಂದು ಮಾನ್ಯ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ. ತಿಳಿಸಿದರು.
ಇಂದು ಯಲಬುರ್ಗಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಬಿಎಲ್ಒ ರವರ ಮತದಾರರ ಮಾಹಿತಿ ಹಂಚಿಕೆ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಚೀಟಿಯ ಜತೆಗೆ ಐಡಿ ಕಾರ್ಡ, ಆಧಾರ್ ಕಾರ್ಡ, ಡ್ರೈವಿಂಗ್ ಲೈಸೆನ್ಸ್, ಉದ್ಯೋಗ ಖಾತ್ರಿ ಚೀಟಿ ಸೇರಿದಂತೆ 11 ವಿವಿಧ ರೀತಿಯ ಗುರುತಿನ ಚೀಟಿಯನ್ನು ಮತದಾನ ಮಾಡುವ ಕೇಂದ್ರದಲ್ಲಿ ತೋರಿಸುವಂತೆ ಪ್ರತಿಯೊಬ್ಬರಿಗೂ ಬಿಎಲ್ಒಗಳು ತಿಳಿ ಹೇಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ್ ಚೌಗಲೆ, ಶಿರಸ್ಥೆದಾರರಾದ ವಿಜಯಕುಮಾರ್, ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಬಿಎಲ್ಒಗಳು ಮತ್ತು ಎಲ್ಲಾ ತಾಲೂಕ ಆಡಳಿತ ಅಧಿಕಾರಿಗಳು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.