ಧಾರವಾಡ - ಹುಬ್ಬಳ್ಳಿ

ಮತದಾರ ಜಾಗೃತಿ ಸೈಕಲ್ ಮತ್ತು ಬೈಕ್ ರಾ​‍್ಯಲಿ

ಮತದಾರ ಜಾಗೃತಿ ಸೈಕಲ್ ಮತ್ತು ಬೈಕ್ ರಾ​‍್ಯಲಿ

ಲೋಕದರ್ಶನ ವರದಿ

ಧಾರವಾಡ ಆ.1: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌.ಐ.ಆರ್)ಹಿ2026 ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಧಾರವಾಡದಲ್ಲಿ ಸೈಕಲ್ ಹಾಗೂ ಬೈಕ್ ರ್ಯಾಲಿ ಆಯೋಜಿಸಲಾಯಿತು.  ಕರ್ನಾಟಕ ಕಾಲೇಜು ವೃತ್ತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಭುವನೇಶ್ ಪಾಟೀಲ ರ್ಯಾಲಿಗೆ ಚಾಲನೆ ನೀಡಿದರು.  

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ರ್ಯಾಲಿ ಕೆಸಿಡಿ ವೃತ್ತ, ಸಪ್ತಾಪುರ, ಜಯನಗರ, ಶ್ರೀನಗರ, ಉದಯ ಹಾಸ್ಟೆಲ್ ವೃತ್ತ, ಹಿಂದಿ ಪ್ರಚಾರ ಸಭೆ ಹಾಗೂ ಕೋರ್ಟ್‌ ವೃತ್ತ ಮಾರ್ಗವಾಗಿ ಜುಬ್ಲಿ ಸರ್ಕಲ್ನಲ್ಲಿ ಸಮಾಪ್ತಿಯಾಯಿತು.  

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಎಫ್‌. ಸಿದ್ದನಗೌಡರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್‌. ರಾಠೋಡ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 


ಸುದ್ದಿ ಓದಿ