ಕಾರವಾರ: ಕ್ಷೇತ್ರದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವವರಿಗೆ ಮತ

ಕಾರವಾರ: ಕ್ಷೇತ್ರದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವವರಿಗೆ ಮತ

ಕಾರವಾರ: ಕ್ಷೇತ್ರದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವವರಿಗೆ ಮತಹಾಕುತ್ತೇವೆ ಎಂದು ಕನರ್ಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಹೇಳಿದರು.

ಕಾರವಾರದ ಪತ್ರಿಕಾ ಭವನದಲ್ಲಿ ಬುಧುವಾರ ಸುದ್ದಿಗೋಷ್ಠಿ ಮಾಡಿದ ಅವರು ನೋಟ್ ಬ್ಯಾನ್ನಿಂದ ಬಡವರು ಸರತಿ ಸಾಲಿನಲ್ಲಿ ನಿಂತು 2 ಲಕ್ಷಕ್ಕಿಂತ ಹೆಚ್ಚು ಹಣ ತೆಗೆಯಲು ಕಾರಣ ನೀಡುವ ಪರಿಸ್ಥಿತಿ ಬಂತು. ಜನಧನ ಸಹ ಶೂನ್ಯ ಠೇವಣಿ ಎಂದು ಜನರನ್ನು ಹಾದಿ ತಪ್ಪಿಸಲಾಯಿತು. ಕನಿಷ್ಠ 2 ಸಾವಿರ ರೂ. ಎಸ್.ಬಿ.ಖಾತೆಯಲ್ಲಿ ಉಳಿಸಬೇಕಾಯಿತು. ಮೋದಿ ಸಕರ್ಾರ ಬಡವರಿಗೆ ಸಹಾಯ ಮಾಡಿದ್ದಕ್ಕಿಂತ ತೊಂದರೆ ನೀಡಿದ್ದು ಹೆಚ್ಚು ಎಂದರು. ಬೇಟಿ ಬಚಾವೂ ಬೇಟಿ ಪಡಾವೋದಲ್ಲಿ ಕೇಂದ್ರ ಸಕರ್ಾರದ ನೆರವು ಇಲ್ಲ. ಕೇವಲ ಮೋದಿ ಭಾವಚಿತ್ರವಿದೆ. ಉಚಿತ ಗ್ಯಾಸ ವಿತರಣೆ ಅಂಥ ಹೇಳಿ , ಗ್ಯಾಸ್ ಸಿಲೆಂಡರ್ ಪಡೆಯುವಾಗ ಹಣ ಪಡೆಯಲಾಗುತ್ತಿದೆ. ಮಧ್ಯಮ ವರ್ಗದ , ಶ್ರೀಮಂತರ ಸಬ್ಸಿಡಿ ಕಿತ್ತು, ಬಡವರ ಉದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ. ಹಾಗಾಗಿ ನಾವು ಬಿಜೆಪಿಗೆ ಮತ ಹಾಕುವುದಿಲ್ಲ. ಮೈತ್ರಿ ಪಕ್ಷದ ಅಭ್ಯಥರ್ಿಗೆ ಈ ಸಲ ಬೆಂಬಲ ನೀಡುತ್ತೇವೆ ಎಂದು ಪ್ರಕಟಿಸಿದರು. 

ಹಾಲಿ ಸಂಸದ, ಕೇಂದ್ರ ಸಚಿವ ದಲಿತರನ್ನು ನಾಯಿಗಳೆಂದು ಕರೆದದ್ದಕ್ಕೆ, ದಾವಣಗೆರೆ, ಬಳ್ಳಾರಿ, ಆಂದ್ರದಲ್ಲಿ ಪ್ರತಿಭಟನೆ ಎದುರಿಸಿದ್ದಾರೆ. ತಮ್ಮ ಅಧಿಕಾರ ಅವಧಿಯ 22 ವರ್ಷದಲ್ಲಿ ಒಮ್ಮೆಯೂ ದಲಿತ ಸಂಘಟನೆಗಳ ಜೊತೆ ಕಷ್ಟ ಸುಖ ವಿಚಾರಿಸಲಿಲ್ಲ. ಅವರಿಗೆ ನಮ್ಮ ಮತವೂ ಬೇಕಾಗಿಲ್ಲ ಅಂತ ಕಾಣುತ್ತದೆ ಎಂದರು. ಹಾಗಾಗಿ ನಮಗೂ ಅವರು ಬೇಡ ಎಂದು ಹೇಳಿದರು. 

ವಾಹನಗಳ ಇನ್ಸುರೆನ್ಸ ಪಡೆಯಲಾಗುತ್ತಿದೆ. ಆದರೆ ವಾಹನಗಳು ಬೆಂಕಿಗೆ ಅನಾಹುತದಲ್ಲಿ ಸುಟ್ಟರೆ, ಫೈಬರ್ ಕವಚ ಇದ್ದ ಗಾಡಿಗಳು ಪೂರ್ಣ ಸುಟ್ಟರೂ ಪರಿಹಾರವಿಲ್ಲ. ಇಂಥ ಅಡ್ನಾಡಿ ವಿಮಾ ಕಾಯ್ದೆಯನ್ನು ಕೇಂದ್ರ ಸಕರ್ಾರ ರೂಪಿಸಿತು. ಸಣ್ಣ ಗುತ್ತಿಗೆದಾರರ ಉದ್ಯಮ ಮಾಡುವಂತಿಲ್ಲ. ಅಷ್ಟೊಂದು ವಿಧಿ ನಿಯಮ ವಿಧಿಸಲಾಗಿದೆ. ಬಡವರು ಬದುಕುವ ಸ್ಥಿತಿ ಇಲ್ಲ. ಬ್ಯಾಂಕ್ ವ್ಯವಹಾರ ಮಾಡುವಂತಿಲ್ಲ. ಕೇಂದ್ರ ಸಕರ್ಾರ ಎಂಥ ಜನದ್ರೋಹಿ ಎಂದರೆ, ನಮ್ಮ ಹಣವನ್ನು ನಾವು ಬ್ಯಾಂಕ್ನಲ್ಲಿ ಇಟ್ಟರೂ ಸೇವಾ ತೆರಿಗೆ, ಎಟಿಎಂನಲ್ಲಿ ಹಣ ತೆಗೆದರೂ ಅದಕ್ಕೆ ಶುಲ್ಕ ಕಟ್ಟುವ ಸನ್ನಿವೇಶವನ್ನು ಕೇಂದ್ರ ಸಕರ್ಾರ ರೂಪಿಸಿತು. ಅನೇಕ ಬ್ಯಾಂಕಗಳನ್ನು ಮುಳುಗಿಸುವ, ಮುಚ್ಚುವ ಸ್ಥಿತಿ ನಿಮರ್ಿಸಿತು. ಸಾರ್ವಜನಿಕ ವಲಯದ ಸಕರ್ಾರಿ ಸಂಸ್ಥೆಗಳನ್ನು ಮುಚ್ಚುವ ಮತ್ತು ಅವುಗಳನ್ನು ಖಾಸಗಿಯವರಿಗೆ ಮಾರುವ ಸನ್ನಿವೇಶವನ್ನು ಬಿಜೆಪಿ ಸಕರ್ಾರ ರೂಪಿಸಿತು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಲಕಪಾಟಿ ಆರೋಪಿಸಿದರು. 

ನಾಳೆ ಮೋದಿಯನ್ನು ಕೇಳಿ ಎಂದರೆ : 

ಜನರಿಂದ ಕಿತ್ತುಕೊಳ್ಳುವ ಗುಣ ಮಾತ್ರ ಮೋದಿಗೆ ಗೊತ್ತು. ರೈತರ ಸಂಕಷ್ಟಕ್ಕೆ ಬರಲಿಲ್ಲ ಎಂದು ಅವರು ಉತ್ತರ ಕನ್ನಡ ಸಂಸದರೂ ಸಹ ಈ ಸಲ ನನಗೆ ಮತ ಕೊಡಬೇಡಿ, ಮೋದಿಗೆ ಮತ ಕೊಡಿ ಎಂದಿದ್ದಾರೆ. ನಾಳೆ ಅವರು ಆಯ್ಕೆಯಾದ ಮೇಲೆ ಸಹ ನನ್ನನ್ನು ಏನು ಕೇಳಬೇಡಿ. ನನಗೆ ನೀವು ಮತ ನೀಡಿಲ್ಲ. ಮೋದಿಗೆ ಮತ ನೀಡಿದ್ದೀರಿ. ಮೋದಿಯನ್ನು ಕೇಳಿ ಎಂದರೆ ನಾವು ಏನು ಮಾಡುವುದು? ಹಾಗಾಗಿ ನಾವು ಈ ಸಲ ಬಿಜೆಪಿ ಬಿಟ್ಟು ಮೈತ್ರಿ ಪಕ್ಷದ ಅಭ್ಯಥರ್ಿಗೆ ಮತ ನೀಡುವ ಯೋಚನೆ ಇದೆ ಎಂದರು.

ಅರಣ್ಯ ಅತಿಕ್ರಮಣ ಸಮಸ್ಯೆ ಬಗೆ ಹರಿಸುವವರಿಗೆ, ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ರಚನೆ ಹಾಗೂ ಕೈಗಾರಿಕೆ ಸ್ಥಾಪಿಸುವವರಿಗೆ ನಮ್ಮ ಮತ ಎಂದು ಕನರ್ಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸ್ಪಷ್ಟಪಡಿಸಿದರು. ಕದರವೇ ಪದಾಧಿಕಾರಿಗಳಾ ಜಿವ್ಹಾಂವ್ ಸಿದ್ದಿ, ರಫೀಕ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ