ಮಹಲಿಂಗಪುರ

ಮಹಾಲಿಂಗಪುರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಮಹಾಲಿಂಗಪುರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ 

ಮಹಾಲಿಂಗಪುರ 21 :  ನಗರದ ಕಾಳಿಕಾ ಸಾ ಮಿಲ್ನಲ್ಲಿ ಸೆ.17ರಂದು ವಿಶ್ವಕರ್ಮ ಜಯಂತ್ಯೋತ್ಸವ, ಧ್ವಜಾರೋಹಣ ಹಾಗೂ ವಿಶ್ವಕರ್ಮ ಪೂಜಾ ಕಾರ್ಯಕ್ರಮ ಭಕ್ತಿ, ಸಂಭ್ರಮದಿಂದ ನಡೆಯಿತು.  

ಯಡಹಳ್ಳಿ ಶ್ರೀ ಮೌನೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಲು ಆದ್ಯತೆ ನೀಡಬೇಕು. ‘ನಾನು’ ಎಂಬ ಅಹಂಕಾರ ತೊರೆದು ಪರಸ್ಪರ ಸಹಕಾರ, ವಿನಯ ಹಾಗೂ ಕೌಶಲ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.  

ಡಾ. ಮಹಾದೇವ ಬಡಿಗೇರ ಮಾತನಾಡಿ, ವೇದಗಳಲ್ಲಿ ವಿಶ್ವಕರ್ಮನಿಗೆ ನೀಡಿರುವ ಮಹತ್ವ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ಅವರ ಪಾತ್ರವನ್ನು ವಿವರಿಸಿದರು. ವಿಶ್ವಕರ್ಮ ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸಾಂಪ್ರದಾಯಿಕ ಕೌಶಲ್ಯದ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಯುವಜನರು ತಮ್ಮ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.  

ಕಾರ್ಯಕ್ರಮದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವೂ ನಡೆಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ವಿಶ್ವಕರ್ಮ ಸಮಾಜದ ಬಂಧುಗಳು ಶಿಬಿರದ ಪ್ರಯೋಜನ ಪಡೆದರು. ಭೀಮಶಿ ಬಡಿಗೇರ, ಈರ​‍್ಪ ಬಡಿಗೇರ ಹಾಗೂ ಮೌನೇಶ ಬಡಿಗೇರ ಸಹೋದರರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. 


ಸುದ್ದಿ ಓದಿ