ಸಿಡಿಪಿಓ ಅಧಿಕಾರಿಯಾಗಿ ವೀರುಪಾಕ್ಷಯ್ಯ ಅಧಿಕಾರ ಸ್ವೀಕಾರ
ಯಲಬುರ್ಗಾ, ಸಪ್ಟೆಂಬರ್ 08: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ವೀರುಪಾಕ್ಷಯ್ಯ ಸೋಮವಾರ ಅಧಿಕಾರ ಸ್ವೀಕರಿಸಿದರು. ಇದಕ್ಕು ಮೊದಲು ಇವರು ಗಂಗಾವತಿ ಸೇರಿದಂತೆ ಬೆಳಗಾವಿಯ ಸರ್ಕಾರಿ ಬಾಲಕಿಯರ ಬಾಲಮಂದಿರದ ಪರಿವೀಕ್ಷಣಾಧಿಕಾರಿ ಸೇವೆ ಸಲ್ಲಿಸಿದ್ದವರು. ಅಲ್ಲದೇ ಯಲಬುರ್ಗಾದಲ್ಲಿ ಸಹ ತಮ್ಮ ಕರ್ತವ್ಯ ನಿರ್ವಹಿಸಿದ್ದ ವೀರುಪಾಕ್ಷಯ್ಯ ಅವರು, ಸೋಮವಾರ ಅಧಿಕಾರ ಸ್ವೀಕರಿಸಿದರು.