ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ನ ಪ್ರತಿಷ್ಠಿತ ಬಾಮರ್ಿ ಆಮರ್ಿ ಪ್ರಶಸ್ತಿ
ನವದೆಹಲಿ 26: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2017-2018ರ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇದೀಗ ಪ್ರತಿಷ್ಠಿತ ಬಾಮರ್ಿ ಆಮರ್ಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಪ್ರಖ್ಯಾತ ಕ್ಲಬ್ ಆಗಿರುವ ಬಾಮರ್ಿ ಆಮರ್ಿ ಹಲವಾರು ವರ್ಷಗಳಿಂದಲೂ ಇಂಗ್ಲೆಂಡ್ ಆಟಗಾರರಿಗೆ ಸ್ಪೂತರ್ಿ ತುಂಬುತ್ತಾ ಬಂದಿದೆ. ಇಂತಹಾ ಮಹತ್ವದ ಕ್ಲಬ್ ಈಗ ಭಾರತ ಕ್ರಿಕೆಟ್ ತಂಡದ ನಾಯಕನನ್ನು ಗುರುತಿಸಿ ಗೌರವಿಸಿದೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿ ಪ್ರಶಸ್ತಿಯೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದೆ. ಹಾಗೆಯೇ "ಬಾಮರ್ಿ ಆಮರ್ಿಯು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು 2017 ಮತ್ತು 2018ರ ಸಾಲಿನ ಇಂಟನ್ಯರ್ಾಷನಲ್ ಪ್ಲೇಯರ್ ಆಫ್ ದಿ ಇಯರ್ ಆಗಿ ಆಯ್ಕೆ ಮಾಡಿದೆ" ಎಂದು ಬರೆದುಕೊಂಡಿದೆ.
ಪ್ರಶಸ್ತಿ ಬಗೆಗೆ ಪ್ರತಿಕ್ರಿಯಿಸಿದ ಕೊಹ್ಲಿ ವಿದೇಶೀ ಅಭಿಮಾನಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರೆ ಹೆಮ್ಮೆಯಾಗುತ್ತಿದೆ. ನಾನೊಬ್ಬ ಕ್ರಿಕೆಟಿಗನಾಗಿ ನನಗೆ ದೊರೆತ ಜಾಗತಿಕ ಮನ್ನಣೆ, ಅಭಿಮಾನಿಗಳ ಪ್ರೀತಿಗೆ ನಾನು ಸದಾ ಋಣಿ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 