ಮಹಲಿಂಗಪುರ

ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಗ್ರಾಮದ ರೈತರಿಂದ ಧರಣಿ

ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಗ್ರಾಮದ ರೈತರಿಂದ ಧರಣಿ

ಮಹಾಲಿಂಗಪುರ 05: ಕಳೆದ ಹಲವು ದಿನಗಳಿಂದ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಬೆಂಬಲಿಸಿ ಚಿಮ್ಮಡ ಗ್ರಾಮದ ರೈತರಿಂದ ಧರಣಿ, ರಸ್ತೆತಡೆ ಹಾಗೂ ಬೈಕ್ ರಾ​‍್ಯಲಿ ನಡೆಯಿತು. 

ಧರಣಿ ನಿರತ ರೈತರನ್ನುದ್ದೇಶಿಸಿ ರೈತಸಂಘದ ಮಹಾಲಿಂಗಪುರ ಘಟಕದ ಅಧ್ಯಕ್ಷ ಬಂದು ಪಕಾಲಿ ಮಾತನಾಡಿ ಸಕ್ಕರೆ ಕಾರಖಾನೆ ಮಾಲಿಕರು ಪ್ರತೀ ಟನ್ ಕಬ್ಬಿಗೆ ಕನಿಷ್ಟ ಬೆಂಬಲ ದರ 3,500 ರೂ. ನೀಡುವವರೆಗೂ ಈ ಹೋರಾಟ ಮುಂದುವರಿಯುತ್ತದೆ, ನೆರೆಯ ರಾಜ್ಯದ ರೈತರಿಗೆ ಸಿಗುತ್ತಿರುವ ಕಬ್ಬಿನ ದರ ನಮ್ಮ ರೈತರಿಗೆ ಏಕಿಲ್ಲ, ಸರಕಾರ ಕೂಡಲೆ ಮದ್ಯ ಪ್ರವೇಶಿಸಿ ನ್ಯಾಯಯುತ ಬೆಲೆ ನಿಗದಿಪಡಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕೆಂದರು. 

ಧರಣಿ, ರಸ್ತೆತಡೆ ನಂತರ ನೂರಾರು ಬೈಕ್‌ಗಳ ರಾ​‍್ಯಲಿ ಮೂಲಕ ಗ್ರಾಮದಿಂದ ಗುರ್ಲಾಪೂರ ಕ್ರಾಸ್‌ವರೆಗೆ ತೆರಳಿ ಅಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳಲಾಯಿತು. ನಂತರ ನಗರದ ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ರಸ್ತೆ ತಡೆದು ಯುವ ಮುಖಂಡ ದೇವರೇಶ ಉಳ್ಳಾಗಡಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಗ್ರಾಮದ ರೈತ ಪ್ರಮುಖರಾದ ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರ​‍್ಪ ಹಳೆಮನಿ, ಆನಂದ ಕವಟಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಶ್ರೀಶೈಲ ರಂಗಾಪೂರ, ಘಟಿಗೆಪ್ಪ ಜಾಂಗನೂರ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ