ವಿಜಯಪುರ: ಕಡ್ಡಾಯವಾಗಿ ಮತದಾನ ಮಾಡಲು ಮನವಿ
ಲೋಕದರ್ಶನ ವರದಿ
ವಿಜಯಪುರ 11: ಭವ್ಯ ಭಾರತದ ಸುಭದ್ರ ಭವಿಷ್ಯಕ್ಕಾಗಿ ನೂರಕ್ಕೆ .ನೂರರಷ್ಟು ಮತದಾನ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಎಬಿವ್ಹಿಪಿ ವತಿಯಿಂದ ನಗರದ ಲಾಲ್ ಬಹುದ್ದೂರ ಶಾಸ್ತ್ರೀ ಮಾರುಕಟ್ಟೆ ಆವರಣದಲ್ಲಿ ಕರಪತ್ರ ವಿತರಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಭಾರತದ ಪ್ರಜಾಪ್ರಭುತ್ವವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಯಂಗ , ನ್ಯಾಯಾಂಗ, ಶಾಸಕಾಂಗ ಮೂರು ಘಟಕಗಳು, ಇದರಲ್ಲಿ ಶಾಸಕಾಂಗವು ಇಡೀ ದೇಶದ ಜನರ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತದೆ. ಆ ಘಟಕದಲ್ಲಿ ನಾವೆಲ್ಲರೂ ಏ.23 ರಂದು ಕಡ್ಡಾಯವಾಗಿ ಮತದಾನ ಮಾಡಿ ಜನರ ಭಾವನೆಗಳಿಗೆ ಸ್ಪಂದಿಸುವ ದೇಶದ ಭವಿಷ್ಯದ ದೃಷ್ಟಿಯಿಂದ ಪೂರಕವಾದ ಸರಕಾರವನ್ನು ರಚನೆ ಮಾಡುವ ಜವಾಬ್ದಾರಿ ಇದೆ. ದೇಶದ ಎಲ್ಲ ಕ್ಷೇತ್ರದ ಜನರು ಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಲಾಯಿತು.
ಒಂದು ದೇಶವು ಸದೃಢವಾಗಿ ಬೆಳಯಬೇಕಾದರೆ ಉತ್ತಮ ಸಕರ್ಾರವನ್ನು ರಚಿಸುವದು ಅತ್ಯವಶ್ಯಕವಾಗಿದೆ. ಉತ್ತಮ ಸರಕಾರಕ್ಕೆ ತಾವು ಮತ ನೀಡಿದಲ್ಲಿ ಅಂತಹ ಸರಕಾರದಿಂದ ಭಾರತ ದೇಶದ ಭವಿಷ್ಯದಲ್ಲಿ ವಿಶ್ವದಲ್ಲಿಯೇ ಹೆಸರು ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿ ದೇಶದ ರಕ್ಷಣೆ, ಭಯೋತ್ಪಾದನೆ ಮೊಟ್ಟ ಹಾಕುವ,ಆರ್ಥಿಕ ಸುಧಾರಣೆಗೊಳಿಸುವ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸದೃಢ ಸರಕಾರವನ್ನು ರಚಿಸುವಂತೆ ತಾವು ಮತ ಚಲಾಯಿಸಬೇಕೆಂದು ಜಾಗೃತಿ ಮೂಡಿಸಲಾಯಿತು.
ಭಾರತ ದೇಶದ ನಾಗರಿಕರಾದ ನಾವು ನಮ್ಮ ಮೌಲ್ಯಯುತವಾದ ಮತದಾನದ ಹಕ್ಕನ್ನು ಸಮರ್ಥ, ಸದೃಢ, ಹಾಗೂ ಜವಾಬ್ಧಾರಿಯುತ ಸರಕಾರವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತ ಚಲಾಯಿಸುತ್ತೇವೆ.ಹಾಗೂ ರಾಷ್ಟ್ರೀಯತೆಯ ಆಧಾರದಲ್ಲಿ ಜನತೆಯ ಶ್ರೇಯೋಭಿವೃದ್ದಿಗಾಗಿ ಹಾಗೂ ರಾಷ್ಟ್ರದ ಅಭಿವೃದ್ದಿಗೆ ಪೂರಕವಾದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಮಾಜದ ಯುವ ಜನತೆಯನ್ನ ಜಾಗೃತಗೊಳಿಸುತ್ತೇವೆಂದು ಎಂದು ಪ್ರತಿಜ್ಙೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಬಿವ್ಹಿಪಿ ವಿಭಾಗ ಸಂಚಾಲಕರಾದ ಸಚೀನ ಕುಳಗೇರಿ, ಬಸವರಾಜ ಪೂಜಾರಿ, ಪಾಂಡು ಮೋರೆ, ಕಲ್ಮೇಶ ಸಾಹುಕಾರ, ವಿನೋದ ಮನ್ನವಡ್ಡರ, ಬಸವರಾಜ ಲಗಳಿ, ಶ್ರೀಕಾಂತ ಬಿರಾದಾರ, ಲಕ್ಷ್ಮೀ ಒಡೆಯರ, ಮಾನಸಿ ಕುಲಕಣರ್ಿ, ಐಶ್ವರ್ಯ, ಅಕ್ಷತಾ ಸಿಂಧೆ, ಅಪೂರ್ಣ ನಾಯ್ಕೋಡಿ ಇನ್ನಿತರರು ಇದ್ದರು.