ವಿಜಯಪುರ: ಲೋಕಸಭಾ ಚುನಾವಣೆ: ತಪ್ಪದೇ ಮತಹಾಕಿ ಪ್ರತಿಜ್ಞಾ ವಿಧಿ ಸ್ವೀಕಾರ

ವಿಜಯಪುರ: ಲೋಕಸಭಾ ಚುನಾವಣೆ: ತಪ್ಪದೇ ಮತಹಾಕಿ ಪ್ರತಿಜ್ಞಾ ವಿಧಿ ಸ್ವೀಕಾರ

ಲೋಕದರ್ಶನ ವರದಿ

ವಿಜಯಪುರ 11: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಕುರಿತು ನಗರದ ಗಾಂಧಿವೃತ್ತದಲ್ಲಿಂದು ವಿಕಲಚೇತನ ಮತದಾರರು, ಅಂಗನವಾಡಿ ಕಾರ್ಯಕತರ್ೆಯರು, ಮೇಲ್ವಿಚಾರಕರು, ಎಂಆರ್ಡಬ್ಲೂ ಹಾಗೂ ಎಆರ್ಡಬ್ಲೂ ತಪ್ಪದೇ ಮತದಾನ ಮಾಡುವ ಕುರಿತಂತೆ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಾಥಾದಲ್ಲಿ ಭಾಗವಹಿಸಿದ್ದ ವಿಕಲಚೇತನ ಮತದಾರರು, ಅಂಗನವಾಡಿ ಕಾರ್ಯಕತರ್ೆಯರು, ಮೇಲ್ವಿಚಾರಕರು, ಎಂಆರ್ಡಬ್ಲೂ ಹಾಗೂ ಎಆರ್ಡಬ್ಲೂಗಳು ಇಂದು ಜಾಥಾ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಸಂಚರಿಸಿ ಬರುವ ಏಪ್ರಿಲ್ 23 ರಂದು ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು. ಮತದಾನದಿಂದ ಯಾರೊಬ್ಬರೂ ವಂಚಿತರಾಗದಂತೆ ಸೂಕ್ತ ಜಾಗೃತಿಯನ್ನು ಮೂಡಿಸಿದರು. 

ಇಂದು ಬೆಳಿಗ್ಗೆ ಈ ಜಾಗೃತಿ ಜಾಥಾವನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ.ಕುಂಬಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ  ಅಶೋಕ ಕೆಲವಡೆ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೃಷ್ಣಮೂತರ್ಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಕೆ.ಕೆ.ಚವ್ಹಾಣ, ರವಿ ರತ್ನಾಕರ, ಮ್ಯಾಗೇರಿ, ಆನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಸುದ್ದಿ ಓದಿ