ಮಹಲಿಂಗಪುರ

ಪ್ರವಾಹ ಪೀಡಿತ ಪ್ರದೇಶ ಸಮೀಪದ ನಂದಗಾಂವ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಭೇಟಿ

ಪ್ರವಾಹ ಪೀಡಿತ ಪ್ರದೇಶ ಸಮೀಪದ ನಂದಗಾಂವ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಭೇಟಿ

ಮಹಾಲಿಂಗಪುರ 29:  ಬೆಳಗಾವಿ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನದಿ ಪಾತ್ರಗಳ ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಸಂದರ್ಭದಲ್ಲಿ ಪ್ರಸ್ತುತ ಸ್ಥಳೀಯರ ಜನಜೀವನ ವೀಕ್ಷಣೆ ಮಾಡಲು ಸಮೀಪದ ನಂದಗಾಂವ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಈ ಸಮಯದಲ್ಲಿ ನಿರಾಶ್ರಿತರ ಶಿಬಿರ ಮತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ಥಳೀಯರಿಗೆ ಊಟೋಪಚಾರ, ಶುಧ್ಧ ಕುಡಿಯುವ ನೀರು, ಓಷಧೋಪಚಾರಗಳನ್ನು ಕಾಲಕಾಲಕ್ಕೆ ಒದಗಿಸಿ ಜನತೆಯ ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಗಿರಿಶ ಸ್ವಾದಿ ಮತ್ತು ಇನ್ನಿತರ ಅಧಿಕಾರಿಗಳಿಗೆ ತಿಳಿಸಿದರು.  

ಪ್ರವಾಹ ಬಾಧಿತ ಹಳೆ ನಂದಗಾಂವ ಗ್ರಾಮದಿಂದ ಜನರನ್ನು ಸರ್ಕಾರಿ ಶಾಲೆ ಮತ್ತು ಇನ್ನಿತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ, ಕಾಳಜಿ ಕೇಂದ್ರವನ್ನು ಸಹ ತೆರೆಯಲಾಗಿದೆ ಎಂದು ಇಓ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು. 

ಆರೋಗ್ಯ ಇಲಾಖೆ ಕಾರ್ಯ: ಘಟಪ್ರಭಾ ನದಿ ತಟದ ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳಲ್ಲಿ ಆರೋಗ್ಯ ಸುರಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಆರೋಗ್ಯ ಸಿಬ್ಬಂದಿಗಳು, ಸಂರಕ್ಷಣಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಸ್ಟಾಪ ನರ್ಸ್‌ ಗಳು 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ, ಸಾಂಕ್ರಾಮಿಕ ರೋಗಗಳು ಹರಡದಂತೆ ನೀರು ನಿಲ್ಲುವ, ಗಲಿಜು ಪ್ರದೇಶ, ಒಟ್ಟಾರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಹಾಗೂ ಧೂಮಿಕರಣ ನಡೆಸಲಾಗಿದೆ. ಯಾವುದೇ ಸಮಯದಲ್ಲಿ ನಾಗರಿಕರು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಓಷಧಿ ಮತ್ತು ಜೀವ ರಕ್ಷಕ ಓಷಧಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಮಹಾಲಿಂಗಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಸಿ ಎಂ. ವಜ್ಜರ್ಮಟ್ಟಿ ಹೇಳಿದರು. 

ವಿಪ ಸದಸ್ಯೆ ಉಮಾಶ್ರೀ ಅವರು ನಂದಗಾಂವ ಗ್ರಾಮಕ್ಕೆ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಹೊಸೂರ, ಜ್ಯೋತೆಪ್ಪ ಕಪರಟ್ಟಿ, ಪ್ರಶಾಂತ ನಾಯಕ, ರಾಜು ಬಾರುಕೋಲ, ಪ್ರಭು ತಂಬೂರಿ, ವಿಠ್ಠಲ್ ಹೊಸಮನಿ, ವಿಠ್ಠಲ ಮ್ಯಾಗಾಡಿ, ರಾಮಣ್ಣ ಹಟ್ಟಿ, ರಾಜು ಮುಲ್ಲಾ, ಕಲ್ಮೇಶ ಉಪ್ಪಾರ, ದಸ್ತಗೀರ ನದಾಫ, ಪುಟ್ಟು ಪೂಜೇರಿ, ರಿಯಾಜ್ ಪೆಂಡಾರಿ ಮುಂತಾದವರಿದ್ದರು. 


ಸುದ್ದಿ ಓದಿ