ಜಮಖಂಡಿ

ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಕುಲಕ್ಕೆ ಜಯವಾಗಲಿ: ಸಚಿವ ಮಲ್ಲಿಕಾರ್ಜುನ

ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಕುಲಕ್ಕೆ ಜಯವಾಗಲಿ: ಸಚಿವ ಮಲ್ಲಿಕಾರ್ಜುನ

ಜಮಖಂಡಿ 14: ಜಾತಿ, ಧರ್ಮದ ಭೇದ ಮರೆತು ಮಾನವೀಯತೆ ಆಧಾರದಲ್ಲಿ ಎಲ್ಲರೂ ಒಂದಾಗಿ ಸಾಗುವುದೇ ಪಂಚಪೀಠಗಳ ಮಹತ್ವದ ಚಿಂತನೆಯಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಕುಲಕ್ಕೆ ಜಯವಾಗಲಿ ಎನ್ನುವು ಉದ್ದೇಶ ನಮ್ಮೆಲ್ಲರ ಆಶಯವಾಗಬೇಕು ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.ನಗರದ ಕಡಪಟ್ಟಿ ದೇವಸ್ಥಾನದ ಆವರಣದಲ್ಲಿ ಶ್ರೀಮದ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾಡಿನ ವಿವಿಧ ಭಾಗದ ಶಿವಾಚಾರ್ಯರು, ಸಾಹಿತಿಗಳು, ವಿದ್ವಾಂಸರು, ಸಮಾಜಚಿಂತಕರು, ಕವಿಗಳು, ಕಲಾವಿದರು ಮತ್ತು ರಾಜಕೀಯ ಮುಖಂಡರು ಪಾಲ್ಗೊಳ್ಳುತ್ತಿರುವ  ಇಂತಹ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ರಂಭಾಪುರಿ ಜಗದ್ಗುರುಗಳು ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುವ ಉದ್ದೇಶದಿಂದ ಮಾನವ ಧರ್ಮಕ್ಕೆ ಜಯವಾಗಲೆಂಬ ಸಂದೇಶ ನೀಡಿದ್ದಾರೆ. ಎಲ್ಲರೂ ಸಮಾಜದ ಬೆಳವಣಿಗೆ ಶ್ರಮಿಸಬೇಕು ಎಂದರು.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರ​‍್ಪ ಅವರು ಸಾಧು-ಸಂತರ ಕುರಿತ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದು, ಈ ವಿಚಾರವನ್ನು ಮತ್ತೆ ಹೇಳಿಕೆ ನೀಡಿದ ವಿವಾದಕ್ಕೆ ಕಾರಣವಾಗುವ ಬದಲು, ಎಲ್ಲರೂ ಒಗ್ಗೂಡಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಎಲ್ಲ ಮಠಗಳ ಬಗ್ಗೆ ಭಕ್ತಿ ಜೊತೆಗೆ ಗೌರವವಿದೆ. ಮಠಗಳ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸರ್ಕಾರದಿಂದ ಸಹಕಾರ ದೊರೆಯುತ್ತಿದೆ. ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವುದಕ್ಕಿಂತ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.ವೀರಗಂಗಾಧರ ಸ್ವಾಮೀಜಿಗಳ ಸಂಕಲ್ಪದಂತೆ ಹಾವೇರಿ ಜಿಲ್ಲೆ ಮುಕ್ತಿಮಂದಿರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕೆಲಸ ಕೈಗೊಳ್ಳಲಾಗಿದ್ದು, ಈ ಯೋಜನೆಗೆ ಅಗತ್ಯ ನೆರವು ನೀಡುವ ಕುರಿತು ಚರ್ಚಿಸಲಾಗಿದ್ದು, 20 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುವದು. ಆರಂಭಿಕವಾಗಿ 5 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ತ್ರಿಕೋಟಿಲಿಂಗ ಸ್ಥಾಪನೆ ಕೆಲಸ ಆದಷ್ಟು ಬೇಗ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವದು. ರೇಣುಕ ಶಿವಾಚಾರ್ಯರ ಪ್ರತಿಮೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಭಕ್ತರು ಕೈಜೋಡಿಸುವ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದರು. 


ಸುದ್ದಿ ಓದಿ