ಜಮಖಂಡಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಚಾಲನೆ
ಲೋಕದರ್ಶನ ವರದಿ
ಜಮಖಂಡಿ 11 : ನಗರದಲ್ಲಿ ನಡೆಯುವ ಬಾಳೆಹೊನ್ನೂರ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮೇಳನದಲ್ಲಿ ಭವ್ಯಾವಾದ ರಥದಲ್ಲಿ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳ ಮೆರವಣಿಗೆ ನಗರದ ಮುಧೋಳ ರಸ್ತೆಯಿಂದ ಪ್ರಮುಖ ರಸ್ತೆಯ ಮೂಲಕ ಭವ್ಯ ಮೆರವಣಿಗೆ ನಡೆಯಿತು.
ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಹನುಮಾನ ಚೌಕ್, ಪೋಸ್ಟ್ ಚೌಕ್, ಅಶೋಕ ವೃತ್ತ ಹಾಗೂ ದೇಸಾಯಿ ವೃತ್ತದ ಮೂಲಕ ಕಲೂತಿ ಮಂಗಲ ಕಾರ್ಯಾಲಯದವರೆಗೆ ಜರುಗಿತು. ಶ್ರೀಗಳು ನಗರಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಸ್ವಾಗತಿಸಿ, ಸಾರೋಟಿನ ಭವ್ಯ ಮೆರವಣಿಗೆಯ ಮೂಲಕ ಗೌರವ ಸಮರ್ಿಸಿದರು.
ಮೆರವಣಿಗೆಯಲ್ಲಿ ಕಲಾತಂಡಗಳು, ವಿವಿಧ ಪೂರ್ಣಕುಂಭಹೊತ್ತ ಮಹಿಳೆಯರು ಹಾಗೂ ಆರತಿ ಹಿಡಿದ ಮಹಿಳೆಯರು ಸ್ವಾಗತಿಸಿದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಶಾಂತಿ-ಸಮೃದ್ಧಿ ಸರ್ವರಿಗಾಗಲಿ ಎಂಬ ಘೋಷವಾಕ್ಯಗಳೊಂದಿಗೆ ರಂಭಾಪುರಿ ಜಗದ್ಗುರುಗಳ ಭವ್ಯ ಪುರ್ರವೇಶ ಜರುಗಿತು.