ಜಮಖಂಡಿಯಲ್ಲಿ ‘ಕುಂಟುಕೋಣ ಮೂಕಜಾಣ’ ನಾಟಕದ ಅಂತಿಮ ಪ್ರದರ್ಶನ
ಲೋಕದರ್ಶನ ವರದಿ
ಜಮಖಂಡಿ 08 : ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದ ವತಿಯಿಂದ ರಾಜಣ್ಣ ಜೇವರ್ಗಿ ಅವರು ರಚಿಸಿರುವ ‘ಕುಂಟುಕೋಣ ಮೂಕಜಾಣ’ ನಾಟಕವು ಸೆಪ್ಟೆಂಬರ್ 8ರಿಂದ ನಗರದ ಬಸವೇಶ್ವರ ಸರ್ಕಲ್ ಬಳಿ ಇರುವ ನಾಟಕ ಕಂಪನಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸುಜಾತಾ ಜೇವರ್ಗಿ ತಿಳಿಸಿದರು.
ನಗರದ ನಾಟಕ ಕಂಪನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕವು ಸಂಪೂರ್ಣ ಹಾಸ್ಯಮಯವಾಗಿದ್ದು, ಯಾವುದೇ ಅಶ್ಲೀಲ ಪದಗಳ ಬಳಕೆಯಿಲ್ಲದೆ ಕುಟುಂಬ ಸಮೇತವಾಗಿ ವೀಕ್ಷಿಸಬಹುದಾಗಿದೆ. ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದ ಪ್ರೇಕ್ಷಕರು ಕುಳಿತು ವೀಕ್ಷಿಸುವಂತಹ ನಾಟಕ ಇದಾಗಿದೆ. ನಾಟಕದಲ್ಲಿ ಅಶ್ಲೀಲತೆಯಿಲ್ಲದ ನೃತ್ಯಗಳೂ ಇರಲಿವೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರೇಕ್ಷಕರು ನಾಟಕ ವೀಕ್ಷಿಸಲಿ ಎಂಬ ಉದ್ದೇಶದಿಂದ ರಾಜಣ್ಣ ಜೇವರ್ಗಿ ಅವರು ವಿಶೇಷ ಅವಕಾಶ ಕಲ್ಪಿಸಿದ್ದಾರೆ. ಒಬ್ಬ ಮಹಿಳೆ ಟಿಕೆಟ್ ಪಡೆದುಕೊಂಡರೆ, ಅವರೊಂದಿಗೆ ಇನ್ನಿಬ್ಬರು ಮಹಿಳೆಯರು ಉಚಿತವಾಗಿ ನಾಟಕ ವೀಕ್ಷಿಸಬಹುದು. ಅಂದರೆ, ಒಂದು ಟಿಕೆಟ್‌ನಲ್ಲಿ ಒಟ್ಟು ಮೂವರು ಮಹಿಳೆಯರು ನಾಟಕ ವೀಕ್ಷಿಸಲು ಅವಕಾಶವಿದೆ ಎಂದರು.
ಕಲಾವಿದರು ಬದುಕಿ ಬಾಳಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಬೆಂಬಲಿಸಬೇಕು. ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರೇಕ್ಷಕರ ಮೇಲಿದೆ ಎಂದು ಮನವಿ ಮಾಡಿದರು.
ಕಲಾವಿದರನ್ನು ಪ್ರೋತ್ಸಾಹಿಸಿ: ಕ್ಯಾಸೋ ಮಾಸ್ಟರ್ ಕೊಡಲಗಿ, ಕ್ಯಾಸೋ ಮಾಸ್ಟರ್ ಕೊಡಲಗಿ ಮಾತನಾಡಿ, ವಿಶ್ವಜ್ಯೋತಿ ಪಂಚಾಕ್ಷರಿ ನಾಟಕ ಕಂಪನಿಯು ಜಮಖಂಡಿ ನಗರದಲ್ಲಿ ‘ಕುಂಟುಕೋಣ ಮೂಕಜಾಣ’ ನಾಟಕವನ್ನು ಪ್ರದರ್ಶಿಸುತ್ತಿದೆ. ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಬದಾಮಿ, ಬಸವರಾಜ ಕುಂಬಾರ, ಧನ್ನರಾಜ ಕುಗಡೆಕ್ಕರ, ಮಾಂತೇಶ ಬಿರಾದಾರ, ಧನ್ನರಾಜ ಭೀಮಸಂದ್ರ, ಪೃಥ್ವಿರಾಜ ಬದಾಮಿ, ಪುಟ್ಟರಾಜ ಕೊಡಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.