ಎಲಬುರ್ಗ

ಬಸವರಾಜ ರಾಯರೆಡ್ಡಿ ಹೇಳಿಕೆಗೆ ವಿರಣ್ಣ ಖಂಡನೆ

ಬಸವರಾಜ ರಾಯರೆಡ್ಡಿ ಹೇಳಿಕೆಗೆ ವಿರಣ್ಣ ಖಂಡನೆ

ಯಲಬುರ್ಗಾ 24: ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು  ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಇನ್ನೊಬ್ಬರಿಗೆ ನಿಂದಿಸುವುದು ಮತ್ತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಹೇಳಿದರು. 

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಅವರು ದನ ಕಾಯೋರು ಕೂಡ ಎಂಎಲ್‌ಎ, ಎಂಪಿ ಹಾಗೂ ಮಂತ್ರಿಗಳಾಗುತ್ತಾರೆ. ಎಂದು  ಹೇಳುವ ಮಾಜಿ ಸಚಿವರು ಇದು ರೈತರ ಮಕ್ಕಳಿಗೆ ಅಪಮಾನ ಮಾಡಿದ್ದಾರೆ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಸಚಿವರು ಹಾಲಪ್ಪ ಆಚಾರ್ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವುದು ಖೇದಕರ. ಹಾಲಪ್ಪ ಆಚಾರ್ ಎಂದಿಗೂ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಅಂತಹವರ ಬಗ್ಗೆ ಈ ರೀತಿ ಟೀಕೆ ಮಾಡಿದ್ದೀರಿ. ಅದು ನಿಮಗೆ ಶೋಬೆ ತರುವಂತದ್ದಲ್ಲ. ರಾಜಕೀಯ ಬಗ್ಗೆ ಏನೇ ಟೀಕೆ ಟಿಪ್ಪಣಿಗಳನ್ನು ಮಾಡಲಿ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಎಂದಿಗೂ ವೈಯಕ್ತಿಕ ಬದುಕಿನಲ್ಲಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವುದು ನಿಲ್ಲಿಸಬೇಕು. ಇದೇ ರೀತಿ ಮುಂದುವರೆದರೆ ಕ್ಷೇತ್ರದಲ್ಲಿ ಬೇರೆ ರೀತಿಯ ರಾಜಕಾರಣ ನಡೆಯಲು ಸಾಕ್ಷಿಗೆ ಗುರಿಯಾಗಬಾರದು. ಹಾಲಪ್ಪ ಆಚಾರ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಗೌರವದಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. 

ಬಣಜಿಗರ ಸಮಾಜದ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಮತ್ತು ದನ ಕಾಯೋರು ಪದ ಬಳಕೆ ಮಾಡಿರುವ ಬಗ್ಗೆ ಸಮಂಜಸವಲ್ಲ. ಸಭೆ ಸಮಾರಂಭಗಳಲ್ಲಿ ಇರುವ ವಾಸ್ತವ ವಿಚಾರಗಳನ್ನು ತಿಳಿಸಬೇಕು.ಬಸಲಿಂಗಪ್ಪ ಭೂತೆ ಮಾತನಾಡಿ, ಮಾಜಿ ಸಚಿವರು ದನ ಕಾಯೋರು ಪದ ಬಳಕೆ ಮಾಡಿರುವುದು ಖಂಡಿಸುತ್ತೇನೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಂತಹ ಅನಾವಶ್ಯಕ ಹಾಗೂ ಆಚಾರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಬಿಡಬೇಕು ಎಂದರು.ಈ ವೇಳೆ ಪಕ್ಷದ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಕಳಕಪ್ಪ ಕಂಬಳಿ, ಶಿವನಗೌಡ ಬನ್ನಪ್ಪಗೌಡ್ರ, ಸಿ.ಎಚ್‌.ಪಾಟೀಲ್, ಶಿವಕುಮಾರ ನಾಗಲಾಪೂರ, ಮಾರುತಿ ಗಾವರಾಳ, ಶಿವಪ್ಪ ವಾದಿ, ರತನ್ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿದರು. 

ಗಣ್ಯರಾದ ಶರಣಪ್ಪ ಈಳಿಗೇರ, ಬಸವನಗೌಡ ತೊಂಡಿಹಾಳ, ಅಮರೇಶ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ್ರ ಹಾಗೂ ಪಕ್ಷದ ಕಾರ್ಯಕರ್ತರು ಸೇರಿ ಮತ್ತಿತರಿದ್ದರು. 


ಸುದ್ದಿ ಓದಿ