ವೈಷ್ಣವಿ ಪಿ. ಘಾಡೆಕರ ರಾಷ್ಟೀಯ ಕ್ರೀಡಾಕೂಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಕಾರವಾರ 09: ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಅ.5 ರಿಂದ 7 ರವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕಾರವಾರ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ವೈಷ್ಣವಿ ಪರಶುರಾಮ ಘಾಡೆಕರ ಇವರು 16 ವರ್ಷದೊಳಗಿನ ಬಾಲಕಿಯರ ವಿಭಾಗದ ‘ಹೈ ಜಂಪ್’ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚೆನೈನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಕ್ರೀಡಾಪಟುವಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ, ಅಥ್ಲೇಟಿಕ್ ತರಬೇತಿದಾರ ಶಿವಾನಂದ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.