ಉಜ್ಬೇಕಿಸ್ತಾನ : ಅಕ್ಟೋಬರ್ 24ರಂದು ಅಧ್ಯಕ್ಷೀಯ ಚುನಾವಣೆ
ತಾಶ್ಕೆಂಟ್, ಜುಲೈ 23 ಉಜ್ಬೇಕಿಸ್ತಾನ ಅಧ್ಯಕ್ಷೀಯ ಚುನಾವಣೆಯನ್ನು ಅಕ್ಟೋಬರ್ 24ರಂದು ನಡೆಸುವುದಾಗಿ ದೇಶದ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
"ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 24, 2021, ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದೆ" ಎಂದು ಆಯೋಗ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಜುಲೈ 23ರಂದು ಚುನಾವಣಾ ಪ್ರಚಾರ ಪ್ರಾರಂಭವಾಗುತ್ತದೆ ಎಂದು ಆಯೋಗ ತಿಳಿಸಿದೆ.