ಮಹಲಿಂಗಪುರ

ಕೃಷಿ ಕ್ಷೇತ್ರದ ಹಿರಿಮೆಯನ್ನು ಎತ್ತಿ ಹಿಡಿಯುವುದೇ ಸಹಕಾರಿ ಕ್ಷೇತ್ರ : ಸಿದ್ದನಗೌಡ ಪಾಟೀಲ

ಕೃಷಿ ಕ್ಷೇತ್ರದ ಹಿರಿಮೆಯನ್ನು ಎತ್ತಿ ಹಿಡಿಯುವುದೇ  ಸಹಕಾರಿ  ಕ್ಷೇತ್ರ : ಸಿದ್ದನಗೌಡ ಪಾಟೀಲ

ಮಹಾಲಿಂಗಪುರ 26: ಸಮೀಪದ ಢವಳೇಶ್ವರದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ  ಸಂಘದ  ವಾರ್ಷಿಕ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷ   ಸಿದ್ದನಗೌಡ ಪಾಟೀಲ ಹೇಳಿದರು 2022-23ನೇ ಸಾಲಿನ ವಾರ್ಷಿಕ ಮಹಾ ಸಭೆ ನಡೆಯಿತು  ಇದರ ದಿವ್ಯ ಸಾನಿಧ್ಯ ವಹಿಸಿದ  ಪರಮ ಪೂಜ್ಯ ಶ್ರೀ ಶರಣ ಬಸವ ದೇವರು, ಚರಂತೇಶ್ವರ ವಿರಕ್ತಮಠ ಬಸವ ಬೆಳವಿ   ಜ್ಯೋತಿ ಬೆಳಗಿಸಿ "ಸಹಕಾರಿ ಸಂಘಕ್ಕೆ  ನಂಬಿಕೆ  ವಿಶ್ವಾಸ ಎಷ್ಟ ಇಟ್ಟಿರುತ್ತಿರಿ  ಅಷ್ಟ ಎತ್ತರ ಬೆಳೆಯಲು ಸಾದ್ಯ, ಈ ಎರಡರಲ್ಲಿ  ದಕ್ಕೆ ತಂದರೆ  ಬ್ಯಾಂಕುಗಳಿಗೆ  ಪರಿಣಾಮ ಬೀರುತ್ತದೆ "ಎಂದು   ಹೇಳಿದರು.  ಇದಕ್ಕೂ ಮೊದಲು ಗ್ರಾಮದ ಎಲ್ಲ  ಶಾಲೆಗಳಲ್ಲಿ   7,  ಮತ್ತು 10 ನೇ ತರಗತಿಯಲ್ಲಿ  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೊತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಮತ್ತು  ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ಶಿಕ್ಷಕ ಸಿ.ವಿ.ದಾದನಟ್ಟಿ  ಅವರನ್ನು ಸಹ ಸನ್ಮಾನಿಸಿ  ಗೌರವಿಸಲಾಯಿತು,  

ಸಂಘದ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಡಿ. ಎಸ್ ಪಟ್ಟಣಶೆಟ್ಟಿ  ವರದಿ  ವಾಚಿಸಿದರು, ವೇದಿಕೆ ಮೇಲೆ  ಉಪಾಧ್ಯಕ್ಷ   ಎಸ್ . ಜಿ.  ಯರಗಟ್ಟಿ ಸದಸ್ಯರು  ಚಿದಾನಂದ ಪಟ್ಟೇದ,  ರಮೇಶ ಪಟ್ಟಣಶೆಟ್ಟಿ,  ಪ್ರಕಾಶ ಪಾಟೀಲ,  ಮಹಾದೇವ ಹವಾಲ್ದಾರ, ಚಂದ್ರಕಾಂತ ಕೌಜಲಗಿ,  ಸದಾಶಿವ ಲಕ್ಕಣಗೋಳ, ರಾಯಪ್ಪ ಹಳ್ಳಿ  ಇದ್ದರು ಗ್ರಾಮದ ಎಲ್ಲ ರೈತರು ಉಪಸ್ಥಿತರಿದ್ದರು.   ಎಮ್  ಎಸ್  ವಡರಟ್ಟಿ  ಸ್ವಾಗತಿಸಿದರು.  ಕೆ.ಜಿ.ನೇಗಿನಹಾಳ  ನಿರೂಪಿಸಿದರು. ಎಸ್ ಎಸ್ ಹಿರೇಮಠ  ವಂದಿಸಿದರು. 


ಸುದ್ದಿ ಓದಿ