ನೈಟ್ ಕರ್ಫ್ಯೂ, ವಿಕೇಂಡ್ ಕರ್ಫ್ಯೂ ಸರ್ಕಾರದ ಅವೈಜ್ಞಾನಿಕ ಕ್ರಮ: ಸತೀಶ ಬಂಡಿವಡ್ಡರ
ಮಹಾಲಿಂಗಪುರ 08; ಕಳೆದೆರಡು ವರ್ಷಗಳ ಕೊರೋನಾ ಲಾಕ್ಡೌನ್ ದಿಂದ ಬಡವ, ಮಧ್ಯಮ ವರ್ಗ ಜನ, ದೊಡ್ಡ ಮತ್ತು ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಸ್ತರು, ವಿದ್ಯಾರ್ಥಿಗಳು ಕಷ್ಟದಿಂದ ಇನ್ನೂ ಹೊರಗೇ ಬಂದಿಲ್ಲ ಮತ್ತೆ ಸರ್ಕಾರ ಈ ನೈಟ್ ಕರ್್ಯೂ ಹಾಗೂ ವಿಕೇಂಡ್ ಕರ್್ಯೂ ಹೇರಿದ್ದು ಅವೈಜ್ಞಾನಿಕವಾಗಿದೆ ಈ ರೀತಿಯ ನಿರ್ಧಾರ ಕೊರೋನಾ ತೊಲಗಲಿಕ್ಕೆ ಪರಿಹಾರವಲ್ಲವೆಂದು ಮುಧೋಳದ ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೊರೋನಾ ಇದ್ದ ಜಿಲ್ಲೆಗಳಿಗೆ ನಿಬಂರ್ಧ ಹೇರಿದ್ದು ಸರಿ ಆದರೆ ಕೊರೋನಾ ಸೊನ್ನೆ ಅಂಕಿ ಸಂಖ್ಯೆ ಇದ್ದ ಬಾಗಲಕೋಟ ಜಿಲ್ಲೆಯಲ್ಲಿ ಅವೈಜ್ಞಾನಿಕ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್್ಯೂ ಹೇರಿದ್ದು ಮಾತ್ರ ಹೈರಾಣಾದ ಜನರಿಗೆ ಮತ್ತಷ್ಟು ನೋವು ತರುತ್ತಿದೆ.
ಇದರಿಂದ ಸಾಮಾನ್ಯ ಜನರಿಗೆ ಬಹಳಷ್ಟು ಕಷ್ಟವಾಗುತ್ತಿದ್ದು ಅಂತಹ ಜನರಿಗೆ ಸಹಾಯಮಾಡುವುದನ್ನು ಬಿಟ್ಟು ಮತ್ತಷ್ಟು ನೋವನ್ನುಂಟು ಮಾಡುತ್ತಿರುವ ಈ ಸರಕಾರಕ್ಕೆ ಕರುಣೆಯೇ ಇಲ್ಲ. ಕೊರೋನಾ ಇಲ್ಲದ ಜಿಲ್ಲೆಗಳನ್ನು ನಿಬಂರ್ಧದಿಂದ ಮುಕ್ತಗೊಳಿಸಿ ಜನಜೀವನ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.