ವಿಶ್ವಸಂಸ್ಥೆ: ನ. 18 2021-25ರ ಅವಧಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತ ಬುಧವಾರ ಜಯಗಳಿಸಿದೆ.
ವಿಶ್ವಸಂಸ್ಥೆ: ನ. 18 2021-25ರ ಅವಧಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತ ಬುಧವಾರ ಜಯಗಳಿಸಿದೆ.
ಭಾರತವು ಈ ಮರುಚುನಾವಣೆಯಲ್ಲಿ 164 ಮತಗಳನ್ನು ಪಡೆಯುವ ಮೂಲಕ 2021-25ರ ವರೆಗೆ ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಯಾಗಿದೆ ಎಂದು ಪ್ಯಾರಿಸ್ ಮೂಲದ ಯುನೆಸ್ಕೋದ ಭಾರತದ ಖಾಯಂ ನಿಯೋಗ ಟ್ವೀಟ್ ಮಾಡಿದೆ.
ಕಾರ್ಯಕಾರಿ ಮಂಡಳಿಯ ಸದಸ್ಯರ ಆಯ್ಕೆ ಬುಧವಾರ ನಡೆಯಿತು. ಗ್ರೂಪ್ ನಾಲ್ಕರಲ್ಲಿ ಏಷ್ಯನ್ ಮತ್ತು ಪೆಸಿಫಿಕ್ ದೇಶಗಳು, ಜಪಾನ್, ಫಿಲಿಪೈನ್ಸ್, ವಿಯೆಟ್ನಾಂ, ಕುಕ್ ದ್ವೀಪಗಳು ಮತ್ತು ಚೀನಾ ಆಯ್ಕೆಯಾದವು.
ಯುನೆಸ್ಕೋ ಎಕ್ಸಿಕ್ಯೂಟಿವ್ ಬೋರ್ಡ್ ಯುಎನ್ ಏಜೆನ್ಸಿಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. ಜನರಲ್ ಕಾನ್ಫರೆನ್ಸ್ನ ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್ ಅಂದಾಜಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಪರಿಶೀಲನೆ ನಡೆಸುತ್ತದೆ.
ಯುನೆಸ್ಕೋ ವೆಬ್‌ಸೈಟ್‌ನ ಪ್ರಕಾರ, ಇದು ನಾಲ್ಕು ವರ್ಷಗಳ ಅಧಿಕಾರಾವಧಿಯೊಂದಿಗೆ 58 ಸದಸ್ಯ-ರಾಜ್ಯಗಳನ್ನು ಒಳಗೊಂಡಿದೆ.