ಬೇಡಿಕೆ ಈಡೇರಿಸದ ಸರ್ಕಾರ : ಧರಣಿ ಸತ್ಯಾಗ್ರಹಕ್ಕೆ ಮುಂದಾದ ನೌಕರರು

ಬೇಡಿಕೆ ಈಡೇರಿಸದ ಸರ್ಕಾರ : ಧರಣಿ ಸತ್ಯಾಗ್ರಹಕ್ಕೆ ಮುಂದಾದ ನೌಕರರು
ಜಮಖಂಡಿ ಅನುದಾನಿತ ಶಿಕ್ಷಕರು ಶಾಸಕ ಆನಂದ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿದರು

ಲೋಕದರ್ಶನ ವರದಿ,

ಜಮಖಂಡಿ 22: ಜಮಖಂಡಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನ  ಅನುದಾನಿತ ಶಾಲಾ ಕಾಲೇಜುಗಳ ನೌಕರರು ಧರಣಿ ಸತ್ಯಾಗ್ರಹ ನಡೆಸಲು ತಿರ್ಮಾನಿಸಲಾಗಿದೆ.ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದ್ದು, ಅನುದಾನಿತ ಶಾಲಾ ಸಿಬ್ಬಂದಿಗಳ ಬಹುದಿನಗಳ  ಬೇಡಿಕೆಗಳಾದ ಓಪಿಎಸ್ ಹಳೆ ಪಿಂಚಣಿ, ಕಾಲ್ಪನಿಕ ವೇತನ, ಜ್ಯೋತಿ ಸಂಜೀವಿನಿ ಜಾರಿ ಮಾಡಬೇಕೆಂದು ಅನೇಕ ಬಾರಿ  ಮನವಿ ಮಾಡಿಕೊಂಡರು ಸರ್ಕಾರ  ಬೇಡಿಕೆ ಈಡೇರಿಸಿರುವುದಿಲ್ಲ.

ಈ ಹಿನ್ನಲೆಯಲ್ಲಿ ಸುಮಾರು 45 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾಕರ್್ನಲ್ಲಿ ಎಲ್ಲ ಶಾಲಾ ಕಾಲೇಜುಗಳ ಸಿಬ್ಬಂದಿಗಳು ನಡೆಸುತ್ತಿರುವ ಹೋರಾಟಕ್ಕೆ ನ, 22 ರಂದು ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಶಾಲಾ ಕಾಲೇಜುಗಳ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್  ಹೊರಡಲಿದ್ದಾರೆ. ಈ ಹೋರಾಟಕ್ಕೆ ಶಾಸಕ ಆನಂದ ನ್ಯಾಮಗೌಡ ಅವರು ಬೆಂಬಲಿಸಲು ನೌಕರರ ಒಕ್ಕೂಟ ಮನವಿ ಸಲ್ಲಿಸಿತು.

ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಚ್.ಪಾರತನಳ್ಳಿ ಕಾರ್ಯದರ್ಶಿ  ಪಿ.ಎ.ರಾಥೋಡ, ಶಿಕ್ಷಕ ಶ್ರೀರಾಮ ಚಿನಗುಂಡಿ,ಎಸ್.ವೈ.ಪೋತಿ, ..ಎನ್.ಪತ್ತಾರ, ನಂದೆಪ್ಪ ತುಪ್ಪದ, ಎಸ್.ವಿ. ಪಾಟೀಲ, ಸದಾಶಿವ ಗುಡ್ಡದ, ಪ್ರಕಾಶ ಸವಳತೋಟ, ಬಾಳು ಲೋಕಾಪೂರ,  ಕ್ಯಾತನ ಅನೇಕರಿದ್ದರು. 



ಸುದ್ದಿ ಓದಿ