ಮಹಲಿಂಗಪುರ

ಉಮಾಶ್ರೀ ಮೊಸಳೆ ಕಣ್ಣೀರು, ಅಧಿಕಾರದ ಹಗಲುಗನಸು: ಸಿದ್ದು ಸವದಿ.

ಉಮಾಶ್ರೀ ಮೊಸಳೆ ಕಣ್ಣೀರು, ಅಧಿಕಾರದ ಹಗಲುಗನಸು: ಸಿದ್ದು ಸವದಿ.

ಮಹಾಲಿಂಗಪುರ 31: ಮಾಜಿ ಸಚಿವೆ ಉಮಾಶ್ರೀ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಭಾವಿ ಖಾತೆ ಹೊಂದಿ, ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದರೂ ಸಹ ನೇಕಾರರಿಗೆ ಏನೂ ಮಾಡದೇ ಈಗ ಮುಂದಿನ ಚುನಾವಣೆಗಾಗಿ ಮೊಸಳೆ ಕಣ್ಣೀರು ಸುರಿಸುತ್ತಾ, ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ, ಅವರ ಕನಸು ಕೈಗೂಡುವುದಿಲ್ಲ ಎಂದು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು. ಸ್ಥಳೀಯ ಪುರಸಭೆಯಲ್ಲಿ ಅಂಗವಿಕಲರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಪರಿಶೀಲಿಸಿದ ನಂತರ ಪುರಸಭಾ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 ಕಾಂಗ್ರೆಸ್ ಸಕರ್ಾರ ಅಧಿಕಾರದಲ್ಲಿದ್ದಾಗ ಇಂತಹ ಸಂಕಷ್ಟ ಇರಲಿಲ್ಲ, ಅದೂ ಅಲ್ಲದೆ ನೇಕಾರ ಸಮುದಾಯದವರೇ ಆದ ಉಮಾಶ್ರೀ ನೇಕಾರರಿಗಾಗಿ ಏನೂ ಮಾಡದೇ ಈಗ ನಮ್ಮ ಪ್ರಾಮಾಣಿಕ ಕಾರ್ಯವನ್ನು ತೆಗಳುತ್ತಿದ್ದಾರೆ.ನಮ್ಮ ಭಾಜಪ ಸಕರ್ಾರ ಬಂದ ಮೇಲೆ ನೇಕಾರ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ ,ಸಾಲ ಮನ್ನಾ, ಪಿಂಚಣಿ, ಸೈಕಲ್ ವಿತರಣೆ, ಲಕ್ಷ ರೂ.ಸಬ್ಸಿಡಿಯಲ್ಲಿ ಎರಡು ವಿದ್ಯುತ್ ಚಾಲಿತ ಮಗ್ಗ ಮುಂತಾದ 20 ಕ್ಕೂ ಹೆಚ್ಚುಯೋಜನೆಗಳನ್ನು ನೇಕಾರರಿಗಾಗಿ ತಂದಿದ್ದೇವೆ. ಕಾಂಗ್ರೆಸ್ ಸಕರ್ಾರ ಅಧಿಕಾರದಲ್ಲಿದ್ದಾಗ ಮಾಡಿದ ನೇಕಾರ ಪರ ಕೆಲಸಗಳಿದ್ದರೆ ಪತ್ರ ಬಿಡುಗಡೆ ಮಾಡಲಿ ಎಂದರು. 

ಕಾಂಗ್ರೆಸ್ ನವರಿಂದಲೇ ಅಪಪ್ರಚಾರ : ಸಕರ್ಾರದ ಪ್ರಾಮಾಣಿಕ ಯೋಜನೆ ಲಸಿಕಾ ಕಾರ್ಯಕ್ರಮದ ಬಗ್ಗೆ ಮಾನವೀಯತೆ ಮರೆತು ಕೇವಲ ರಾಜಕಾರಣದ ದೃಷ್ಟಿಯಿಂದ ಅಪಪ್ರಚಾರ ಮಾಡಿ, ಜನರಲ್ಲಿ ಭೀತಿ ಬಿತ್ತಿ ಜನರು ಲಸಿಕೆ ಪಡೆಯದಂತೆ ಮಾಡಿ, ತಾವು ಮಾತ್ರ ಲಸಿಕೆ ಪಡೆದು ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಲಸಿಕೆ ಕೆಡಬಾರದೆಂದು 40 ಕೋಟಿ ಲಸಿಕೆಯನ್ನು ವಿದೇಶಕ್ಕೆ ಕೇಳಿಸುವಂತೆ ಮಾಡಿ ಈಗ ಪರಿಸ್ಥಿತಿ ಕುತ್ತಿಗೆಗೆ ಬಂದಾಗ ಲಸಿಕೆ ಬೇಕೆಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದರು. ಈಗ ಲಸಿಕಾ ಕೊರೆತೆ 1500 ಕೋವ್ಯಾಕ್ಸಿನ್, 2000 ಕೋವಿಶೀಲ್ಡ್ ಲಸಿಕೆಗಳ ಸಂಗ್ರಹವಿದ್ದು ಅಪಪ್ರಚಾರ ಮಾಡುವವರು ಮಾತನ್ನು ಲಸಿಕೆ ಪಡೆದು ಜೀವ ಉಳಿಸಿಕೊಳ್ಳಬೇಕು ಎಂದರು.

ಸೇವಾ ಕಾರ್ಯ: ಪ್ರಧಾನ ಮಂತ್ರಿ ಮೋದಿಯವರ 2 ಅವಧಿಯ 2 ವರ್ಷದ ಯಶಸ್ವಿ ಆಡಳಿತದ ಸಾಧನೆಗಾಗಿ ಬನಹಟ್ಟಿಯಲ್ಲಿ 200 ಸಸಿ ನೆಟ್ಟು ಆಚರಿಸಲಾಯಿತು ಹಾಗೂ ಆಸ್ಪತ್ರೆಗಳಿಗೆ ಹಣ್ಣು ಹಂಪಲು ಹಂಚಲಾಯಿತು. ಕಳೆದ 20 ದಿನಗಳಿಂದ ಬಡವರು, ಲಾರಿ ಚಾಲಕರು, ಕೊರೊನಾ ರೋಗಿಗಳು ಸೇರಿದಂತೆ ನಿತ್ಯ 500 ಆಹಾರ ಕಿಟ್ ವಿತರಿಸುತ್ತಿರುವುದಾಗಿ ಕೊರೋನಾ ಸಂಕಷ್ಟ ತೀರುವ ವರೆಗೆ ಮುಂದುವರಿಸುವುದಾಗಿ ತಿಳಿಸಿದರು.

ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಜಿ.ಎಸ್.ಗೊಂಬಿ, ಈರಪ್ಪ ದಿನ್ನಿಮನಿ, ಬಸವರಾಜ ಹಿಟ್ಟಿನಮಠ,ಚನ್ನಬಸು ಯರಗಟ್ಟಿ, ಜಮೀರ್ ಯಕ್ಸಂಬಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಪ್ಪ ರಾಮೋಜಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಇದ್ದರು.2 ದಿನದಲ್ಲಿ ಆಮ್ಲಜನಕ ಬೆಡ್ : ಸಮೀರವಾಡಿ ಗೋದಾವರಿ ಸಕ್ಕರೆ ಕಾಖರ್ಾನೆಯವರು ಆಮ್ಲಜನಕ ಪೂರೈಸಲು ಒಪ್ಪಿದ್ದು, ಇನ್ನೆರಡು ದಿನಗಳಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್ ವ್ಯವಸ್ಥೆ ಕಲ್ಪಿಸಲಾಗುವುದು : ಶಾಸಕ ಸಿದ್ದು ಸವದಿ.ಮಹಾಲಿಂಗಪುರ ಪುರಸಭಾ ಸಭಾಭವನದಲ್ಲಿ ಶಾಸಕ ಸಿದ್ದು ಸವದಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು 

ಸುದ್ದಿ ಓದಿ