ರಬಾಕಾವಿಬನಹಟ್ಟಿ

ನಿವೃತ್ ಯೋಧನಿಗೆ ಕಾಂಗ್ರೆಸ್ ಸಹಾಯ ಹಸ್ತ

ನಿವೃತ್ ಯೋಧನಿಗೆ ಕಾಂಗ್ರೆಸ್ ಸಹಾಯ ಹಸ್ತ

ರಬಕವಿ-ಬನಹಟ್ಟಿ 22: ಬನಹಟ್ಟಿ ನಗರದ ಮಾಜಿ ಯೋಧ ಈರಾ​‍್ಪ ಕಾಳಪ್ಪ ಬಡಿಗೇರ 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಅವರ ನಿವೃತ್ತಿ ನಂತರದ ಜೀವನ ಬಹಳ ಕಷ್ಟವಾಗಿತ್ತು. ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು.  

ವರದಿಗೆ ಸ್ಪಂದಿಸಿದ ಮಾಜಿ ಸಚಿವೆ ಉಮಾಶ್ರೀ ಈರಾ​‍್ಪ ಬಡಿಗೇರ ಯೋಧನಿಗೆ ಮೂರು ತಿಂಗಳಿಗಾಗುವಷ್ಟು ರೇಶನ್ ಕಿಟ್ ಹಾಗೂ ರೂ. 10,000 ಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಮೂಲಕ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಾಂಗ್ರೆಸ್ ಪಕ್ಷದ ನಗರ ಘಟಕ ಅಧ್ಯಕ್ಷ ರಾಜೇಂದ್ರ ಭದ್ರನ್ನವರ ಈರಾ​‍್ಪ ಬಡಿಗೇರಗೆ ಸಹಾಯಧನವನ್ನು ನೀಡಿದರು.  ನಗರಸಭಾ ಸದಸ್ಯ ಬಸವರಾಜ ಗುಡೋಡಗಿ, ಓಂಪ್ರಕಾಶ್ ಮನಗೂಳಿ, ಓಬಿಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಳು ಹಿಪ್ಪರಗಿ, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಶ್ರೀಶೈಲ ಮೇಣಿ, ಸತ್ಯಪ್ಪ ಮಗದುಮ, ನಸೀಮ ಮೋಕಾಶಿ, ಬಸವರಾಜ ಬೀಳಗಿ, ಕಿರಣ್ ಕರಲಟ್ಟಿ, ಗುಂಡು ಪಾಟೀಲ, ಹಣಮಂತ ಬಡ್ಡಿ, ಬಸವರಾಜ ಶಿಂಧೆ, ನಾಗಪ್ಪ ಬಂಗೇನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ