ಅಮೆರಿಕ ಚುನಾವಣೆ: ಎರಡನೇ ಚರ್ಚೆಯೂ ರದ್ದು
ವಾಷಿಂಗ್ಟನ್ , ಅ 10 :ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇರುವಾಗಲೇ ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆಯೂ ರದ್ದುಗೊಂಡಿದೆ. ಡೊನಾಲ್ಡ್ ಟ್ರಂಪ್- ಜೋ ಬಿಡೇನ್ ನಡುವಿನ ಚರ್ಚೆಯನ್ನು ವರ್ಚ್ಯುಯಲ್ ಫಾರ್ಮಾಟ್ ನ ಮೂಲಕ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದಕ್ಕೆ ಡೊನಾಲ್ಡ್ ಟ್ರಂಪ್ ಒಪ್ಪದ ಕಾರಣ ಚರ್ಚೆ ರದ್ದುಗೊಳಿಸಲಾಗಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಕಡೆ ಗಮನ ನೀಡುತ್ತಿದ್ದ ವೈದ್ಯರ ತಂಡ ಅ.15 ರಂದು ನಡೆಯಬೇಕಿದ್ದ ಅಧ್ಯಕ್ಷೀಯ ಚರ್ಚೆಯನ್ನು ಚರ್ಚೆಯನ್ನೂ ರದ್ದುಗೊಳಿಸಲಾಗಿದೆ. ಅ.22 ರಂದು ನಡೆಯಲಿರುವ ಅಂತಿಮ ಚರ್ಚೆಯತ್ತ ಆಯೋಗ ಗಮನ ಹರಿಸಲಿದೆ ಎಂದೂ ಸಿಪಿಡಿ ತಿಳಿಸಿದೆ.