ಬೆಳಗಾವಿ

ಬಸ್ ನಿಲ್ದಾಣಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಮನವಿ

ಬಸ್ ನಿಲ್ದಾಣಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಮನವಿ



ಯಮಕನಮರಡಿ 06 : ಸಮೀಪದ ಹತ್ತರಗಿ - ದಾದಬಾನಹಟ್ಟಿ ಹತ್ತಿರ ನೂತನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4 ರಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.ಈಗಾಗಲೇ ಕೆಎಸ್‌ಆರ್ಟಿಸಿ ಸಂಕೇಶ್ವರ, ಚಿಕ್ಕೋಡಿ ಹಾಗೂ ಹುಕ್ಕೇರಿ ಘಟಕದ ಹತ್ತರಗಿ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಮಾರ್ಗವಾಗಿ ಬೆಳಗಾವಿ ಕಡೆಗೆ ತೆರಳುವ ಎಲ್ಲ ಬಸ್ಸುಗಳನ್ನು ನಿಲ್ದಾಣದಲ್ಲಿ ನಿಲ್ಲಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸೇವಾ ಮನೋಭಾವದಿಂದ ರಾಜು ಗರಗಟ್ಟಿ ಹಾಗೂ ದಯಾನಂದ ನವಲಗುಂದಿ ಅವರು ಖುದ್ದಾಗಿ ಸರದಿ ನಿಲ್ದಾಣಗಳಿಗೆ ಬ್ಯಾನರ್ ಅಳವಡಿಸಿ, ದಿನಾಂಕ 05-10-2026 ರಂದು ಚಾಲನೆ ನೀಡಿದರು. 


ಸುದ್ದಿ ಓದಿ