ರಾಜೀನಾಮೆ ನೀಡುವ ಸವಾಲು ಹಾಕಿದ ಯು.ಬಿ.ವೆಂಕಟೇಶ್

ರಾಜೀನಾಮೆ ನೀಡುವ ಸವಾಲು ಹಾಕಿದ ಯು.ಬಿ.ವೆಂಕಟೇಶ್

 ಬೆಂಗಳೂರು,ಸೆ.23 ತಾವು ಮಾಡಿರುವ ಆರೋಪ ಮಾಹಿತಿ ಸುಳ್ಳಾಗಿದ್ದಲ್ಲಿ ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಸವಾಲು ಹಾಕಿದದಾರೆ.
 
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಕ್ರೀಡಾಂಗಣ ನಿರ್ವಹಣೆ ಮಾಡಲು ಬಿಬಿಎಂಪಿ ವಿಫಲವಾಗಿದೆ.ಹೀಗಾಗಿ ಇದನ್ನು ಬೇರೆ ಪ್ರಾಧಿಕಾರಕ್ಕೆ ವಹಿಸುವಂತೆ ಸಚಿವರಿಗೆ ಪ್ರಶ್ನೆ ಕೇಳಿದರು.
 
ಇದಕ್ಕೆ ಉತ್ತರಿಸಿದ ಮಾಧುಸ್ವಾಮಿ, ಈಗಾಗಲೇ ಇದನ್ನು  ಬಿಬಿಎಂಪಿ ಜವಾಬ್ದಾರಿಗೆ ವಹಿಸಿಕೊಡಲಾಗಿದೆ.ಕ್ರೀಡಾಂಗಣ ನಿರ್ವಹಣೆ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಕ್ರಮಕೈಗೊಂಡಿದೆ. ಅನುದಾನ ಬಳಕೆ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸಲು ಟೆಂಡರ್ ಕರೆದು ಕೆಲಸವನ್ನೂ ಆರಂಭಿಸಿದೆ. ಹೀಗಾಗಿ ಈಗಲೇ ಬಿಬಿಎಂಪಿ ಬಿಟ್ಟು ಬೇರೆ ಪ್ರಾಧಿಕಾರಕ್ಕೆ ಕೊಡಲು ಸಾಧ್ಯವಿಲ್ಲ.ನಿರ್ವಹಣೆಗೆ ಬಿಬಿಎಂಪಿ ಮುಂದಾಗಿರುವ ಈ ಮಾಹಿತಿ ತಪ್ಪಾಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
 
ಆದರೆ ಸಚಿವರು ನೀಡಿದ ಉತ್ತರ ಸದಸ್ಯ ವೆಂಕಟೇಶ್ ಗೆ ಸರಿಬಾರದೇ ಇದ್ದಾಗ, ತಾವು ಮಾಡಿರುವ ಎಲ್ಲಾ ಆರೋಪಗಳು ನಿಜವೇ ಆಗಿದ್ದು, ಈ ವಿಚಾರದಲ್ಲಿ ಸುಳ್ಳುಹೇಳಿರುವುದು ಸಾಬೀತಾದಲ್ಲಿ ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಆಕ್ಷೇಪ ವ್ಯಕ್ತಪಡಿಸಿದರು.
 
ಆಗ ಸಚಿವ ಮಾಧುಸ್ವಾಮಿ,.ನಮಗೆ ತಪ್ಪು ಮಾಹಿತಿ ನೀಡಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದೇನೆಯೇ ಹೊರತು ಸದಸ್ಯರು ಸುಳ್ಳು ಹೇಳುತ್ತಿದ್ದಾರೆನ್ನುತ್ತಿಲ್ಲ.ಆದರೂ ಪಾಲಿಕೆಯಿಂದ ಕ್ರೀಡಾಂಗಣ ಹಿಂಪಡೆಯುವ ಬಗ್ಗೆ ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಲಾಗುವುದು. ಒಂದುವೇಳೆ ಬಿಬಿಎಂಪಿಯಿಂದ ನಿರ್ವಹಣೆ ಅಸಾಧ್ಯವಾದಲ್ಲಿ ಪಾಲಿಕೆ ಜೊತೆ ಚರ್ಚಿಸಿ  ಸರ್ಕಾರ ಬೇರೆ ನಿರ್ಧಾರ ಕೈಗೊಳ್ಳಲಿದೆ ಎಂದು ಎಂದರು.
 

ಸುದ್ದಿ ಓದಿ