ಬೆಳಗಾವಿ ಬಳಿ ಭೀಕರ್ ಅಪಘಾತ ಸ್ಥಳದಲ್ಲಿಯೇ ಇಬ್ಬರ ಸಾವು: ಚಾಲಕ ಗಂಭೀರ, ನೂರಾರು ಕೋಳಿಗಳು ಬಲಿ

ಬೆಳಗಾವಿ ಬಳಿ ಭೀಕರ್ ಅಪಘಾತ ಸ್ಥಳದಲ್ಲಿಯೇ ಇಬ್ಬರ ಸಾವು: ಚಾಲಕ ಗಂಭೀರ, ನೂರಾರು ಕೋಳಿಗಳು ಬಲಿ
Two people died on the spot in a Bheekar accident near Belgaum: Driver in critical condition, hundre

ಬೆಳಗಾವಿ : ರಸ್ತೆಯಲ್ಲಿ  ನಿಂತಿದ್ದ ಲಾರಿಗೆ ಕೋಳಿ ಸಾಗಾಣಿಕೆ ಮಾಡ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಪ್ರಯಾಣಿಕರು ಸೇರಿದಂತೆ ನೂರಾರು ಕೋಳಿಗಳು ಮೃತಪಟ್ಟಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. 

    ಈ ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಕ್ಕಪೇಟೆ ನಿವಾಸಿ ವಾಸೀಮ್(28), ಮುಬಾರಕ್ (22) ಇವರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 

ಶಿಕಾರಿಪುರ ತಾಲೂಕಿನ ಮುಗಳಿಕೊಪ್ಪ ಗ್ರಾಮದ ವಾಹನ ಚಾಲಕ ಬಸವರಾಜ ಹಂಚಿನ‌ಮನಿ (37) ಗಂಭೀರ ಗಾಯವಾಗಿ ಗಾಯಗೊಂಡಿದ್ದಾರೆ. 

  ಬೆಳಗಾವಿ ನಗರದ ಹೊರವಲಯದ ಯಡಿಯೂರಪ್ಪ ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. 

ಅಪಘಾತದ ರಭಸಕ್ಕೆ ಚಾಲಕನ ಪಕ್ಕದಲ್ಲಿದ್ದ ಇಬ್ಬರು ದಾರುಣ ಸಾವು, ಚಾಲಕ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ಬೆಳಗಿನಜಾವ ನಿದ್ರೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿಹೊಡೆದಿದೆ.

  ಮೃತದೇಹಗಳು ಹಾಗೂ ಗಾಯಾಳುಗಳನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವಾಹನವು ಕೊಲ್ಲಾಪುರದಿಂದ ಶಿವಮೊಗ್ಗದ ಸೊರಬಕ್ಕೆ ಕೋಳಿ ತುಂಬಿಕೊಂಡು ಈ ಗೂಡ್ಸ್ ವಾಹನ ಹೋಗುತ್ತಿತ್ತು ಎನ್ನಲಾಗಿದೆ. ಈ ಗೂಡ್ಸ್ ವಾಹನ ಅಪಘಾತ ದಲ್ಲಿ ನೂರಾರು ಕೋಳಿಗಳು ಸಾವಾಗಿವೆ.

    ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಪಿಎಸ್ಐ ಅವಿನಾಶ್ ಸೇರಿ ಪೊಲೀಸ ಸಿಬ್ಬಂದಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಓದಿ