ಬಾಗ್ದಾದ್‌ನಲ್ಲಿ ಬಾಂಬ್ ಸ್ಫೋಟ: ಇಬ್ಬರಿಗೆ ಗಾಯ
ಬಾಗ್ದಾದ್, ಆಗಸ್ಟ್ 5 ಇರಾಕಿ ರಾಜಧಾನಿ ಬಾಗ್ದಾದ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಬಾಂಬ್ ಸ್ಫೋಟ ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಇರಾಕ್ ಆಂತರಿಕ ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಬಾಗ್ದಾದ್‌ನ ಕರಾಡಾ ಜಿಲ್ಲೆಯಲ್ಲಿ ಒಂದು ಸ್ಫೋಟ ಸಂಭವಿಸಿದ್ದು, ಖಾಸಗಿ ಇರಾಕಿನ ಭದ್ರತಾ ಕಂಪನಿಗೆ ಸೇರಿದ ವಾಹನಕ್ಕೆ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಿಸಿ ಇಬ್ಬರನ್ನು ಗಾಯಗಿಗೊಳಿಸಲಾಗಿದೆ.
ಎಂದು ಮೂಲಗಳು ಹೇಳಿವೆ.
ಅದೇ ಜಿಲ್ಲೆಯ ಮದ್ಯದಂಗಡಿಯಲ್ಲಿ ಮತ್ತೊಂದು ಬಾಂಬ್ ಸ್ಫೋಟಿಸಿದ್ದು, ಇದರಿಂದ ಅಂಗಡಿಗೆ ವಸ್ತು ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇರಾಕಿ ಭದ್ರತಾ ಪಡೆಗಳು ಸ್ಫೋಟದ ಸ್ಥಳವವನ್ನು ಸುತ್ತುವರಿದು ಘಟನೆಗಳ ಬಗ್ಗೆ ತನಿಖೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಇರಾಕ್ ಭದ್ರತಾ ಪಡೆಗಳು 2017 ರ ಕೊನೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ಉಗ್ರಗಾಮಿ ಉಗ್ರರನ್ನು ಸಂಪೂರ್ಣವಾಗಿ ಸೋಲಿಸಿದ ನಂತರ ಇರಾಕ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಆದರೂ ಐಎಸ್ ಸಂಘಟನೆ ನಗರ ಪ್ರದೇಶಗಳು ಅಥವಾ ಮರುಭೂಮಿಗಳು ಮತ್ತು ಒರಟಾದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಪದೇ ,ಪದೇ ಗೆರಿಲ್ಲಾ ದಾಳಿ ನಡೆಸುವ ಮೂಲಕ ಅಶಾಂತಿಗೆ ಕಾರಣವಾಗುತ್ತಿವೆ.