48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಬೆಳಗಾವಿ : ಮನೆಯಲ್ಲಿದ್ದ ಲಕ್ಷಂತರ ಮೌಲ್ಯದ ಚಿನ್ನಾಭರಣ ದೋಚಿ ಫರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರು ಖದೀಮರನ್ನು ಬಂಧಿಸಿರುವ ಜಿಲ್ಲೆಯ ಕಟಕೋಳ ಪೊಲೀಸರು ಬಂಧಿತರಿAದ 21,02,560 ಮೌಲ್ಯದ 154.6 ಗ್ರಾಂ ಬಂಗಾರದ ಆಭರಣ ಹಾಗೂ 11,250 ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸಿಯಾಗಿದ್ದಾರೆ.
ಬಂಧಿತರನ್ನು ಹಣಮಂತ ಯಲ್ಲಪ್ಪ ಮಾರಾಪೂರ (27) (ಸಾಃ ಕಮಲದಿನ್ನಿ ತಾಃ ಮೂಡಲಗಿ), ಶ್ರೀಮತಿ ಹಸೀನಾ ತಂದೆ ಅಪ್ಪಾಸಾಬ ನದಾಫ್, ಗಂಡ ಶರೀಫ್ (24) (ಸಾ: ಹೊಸಕೋಟಿ ತಾಃ ರಾಮದುರ್ಗ ಹಾಲಿಃ ಕಮಲದಿನ್ನಿ ತಾಃ ಮೂಡಲಗಿ) ಇವರಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ದಿ. 5ರಂದು ಶ್ರೀಮತಿ ದಿಲ್‌ಶಾದ ಸೈದುಸಾಬ ನದಾಫ್ (ಹಾಸ್ಟೆಲ್ ವಾರ್ಡನ್, ಸಾಃ ಹೊಸಕೋಟಿ, ತಾಃ ರಾಮದುರ್ಗ ಹಾಲಿಃ ನೆಹರೂ ನಗರ ಬೆಳಗಾವಿ) ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ, ಮನೆಯದ್ದ 154.6 ಗ್ರಾಂ ಬಂಗಾರದ ಆಭರಣ, 21,02,560 ಹಾಗೂ 11,250 ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳರು ಕಳುವು ಮಾಡಿದ ಬಗ್ಗೆ ದೂರು ನೀಡಿದ್ದನ್ನು ಕಟಕೋಳ ಪೊಲೀಸ್ ಠಾಣಾ ಅಪರಾಧ ಸಂಖ್ಯೆ. 85/2026 ಕಲಂ: 305, 331(4) ಬಿ.ಎನ್.ಎಸ್-2023 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ, ಇವರ ನೇತೃತ್ವದಲ್ಲಿ ಕಟಕೋಳ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಬಸವರಾಜ ಕೊಣ್ಣೂರೆ, ನುರಿತ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಎಸ್.ಎಸ್.ವಜ್ರಮಟ್ಟಿ, ಎಂ.ಸಿ.ಮನ್ನಿಕೇರಿ, ಎಮ್.ಆರ್.ಲಡ್ಡಿ, ಎಸ್.ಎಫ್.ಭಾಂಗಿ, ವಿ.ಆರ್.ಗಲಬಿ ತನಿಖಾ ಸಹಾಯಕರಾದ ಆರ್.ಬಿ.ಗೋಕಾಕ, ಡಿ.ಎಚ್.ನಧಾಫ ಮತ್ತು ಬಿ.ಎಸ್.ಚುಂಚನೂರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ವಿನೋದ ಠಕ್ಕನ್ನವರ ಹಾಗೂ ಸಚೀನ ಪಾಟೀಲ ಇವರ ತಂಡವನ್ನು ರಚಿಸಿದ್ದು, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಹಣಮಂತ ಯಲ್ಲಪ್ಪ ಮಾರಾಪೂರ ಮತ್ತು ಶ್ರೀಮತಿ ಹಸೀನಾ ತಂದೆ ಅಪ್ಪಾಸಾಬ ನದಾಫ್, ಗಂಡ ಶರೀಫ್ ಇವರನ್ನು 48 ಗಂಟೆಯಲ್ಲಿ ಕಟಕೋಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧೀತರಿAದ 32 ಗ್ರಾಂ ರಾಣಿ ಸರ, ಅ.ಕಿ=435200 ರೂ, 34 ಗ್ರಾಂ ಅವಲಕ್ಕಿ ಸರ ಅ.ಕಿ=462400 ರೂ, 4.5 ಗ್ರಾಂ ಚೈನ ಒಂದು 61200 ರೂ, 3.5 ಗ್ರಾಂ ಹರಳಿನ ಜುಮಕಿ 47600 ರೂ, 1.8 ಗ್ರಾಂ ಚಿಕ್ಕ ಮಕ್ಕಳ 4 ಉಂಗುರ 24480/-ರೂ, 10 ಗ್ರಾಂ ಬೆಳ್ಳಿ ಸುತ್ತು ಉಂಗುರ 2500 ರೂ, 39 ಗ್ರಾಂ ತಾಳ ಚೈನ 530400 ರೂ, 32 ಗ್ರಾಂ ಬಳೆ ನಾಲ್ಕು 435200 ರೂ, 6.5 ಗ್ರಾಂ ಚೈನ ಲಾಕೇಟ 88400 ರೂ, 1.3 ಗ್ರಾಂ ಕಿವಿಯ ರಿಂಗ 17680 ರೂ, 35 ಗ್ರಾಂ ಬೆಳ್ಳ ಪೆಂಡದ ಗೆಜ್ಜೆ 8750 ರೂ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ನಂ :ಕೆಎ-49/256-2878 ಹೀಗೆ ಒಟ್ಟು 21,02,560 ಮೌಲ್ಯದ 154.6 ಗ್ರಾಂ ಬಂಗಾರದ ಆಭರಣ, ಹಾಗೂ 11,250 ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಆರೋಪಿತರಿಂದ ಕಡೆಯಿಂದ ಕಟಕೋಳ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.