ನಕಲಿ ದಾಖಲೆ ಸೃಷ್ಟಿಸಿ ಒಬ್ಬರ ಜಮೀನು ಇನ್ನೊಬ್ಬರಿಗೆ ಮಾರಾಟ : ಇಬ್ಬರ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಒಬ್ಬರ ಜಮೀನು ಇನ್ನೊಬ್ಬರಿಗೆ ಮಾರಾಟ : ಇಬ್ಬರ ಬಂಧನ

ಸಂಕೇಶ್ವರ/ಬೆಳಗಾವಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಬ್ಬರಿಗೆ ಸೇರಿದ ಜಮೀನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದ ಇಬ್ಬರನ್ನು ಜಿಲ್ಲೆಯ ಸಂಕೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಈ ಪ್ರಕರಣದಲ್ಲಿ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ  ಶಿವರುದ್ರ ಪ್ರಧಾನಿ ಕುದನೂರಿ, ಹಾಗೂ ಹುಕ್ಕೇರಿ ತಾಲೂಕಿನ ‌ಉ. ಖಾನಾಪುರ ಹಾಲಿ ಕುರಣಿ ನಿವಾಸಿ ಶ್ರೀಮತಿ ಗಂಗವ್ವ ಶೆಟ್ಟೆಪ್ಪ ಮುದಪಾಕಿ ಇವರಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
    ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಜಮೀನ ರಿ.ಸ ನಂ: 183/1ಬ ಕ್ಷೇತ್ರ 01 ಎಕರೆ 13 ಗುಂಟೆ ಜಮೀನನ್ನು ನಕಲಿ ಆಧಾರ ಸೇರಿದಂತೆ ದಾಖಲೆಗಳನ್ನು ಸೃಷ್ಟಿಸಿ ಸಂಕೇಶ್ವರ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾರಾಟ ಮಾಡಲಾಗಿತ್ತು.
    ಈ ಕುರಿತು ಸಂಕೇಶ್ವರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 135/2025, ಕಲಂ: 419, 420, 465, 468, 471 ಸಹಕಲಂ 149 ಐಪಿಸಿ ನೇದ್ದರಲ್ಲಿ ಪಿರ್ಯಾದಿ ದುಂಡಪ್ಪಾ ಶಂಕರ ಕುದನೂರಿ, ಸಾ: ಕುರಣಿ, ತಾ : ಹುಕ್ಕೇರಿ ಇವರ ನಕಲಿ ಆಧಾರ ಕಾರ್ಡ ಸೃಷ್ಟಿಸಿ ಸಂಕೇಶ್ವರ ಉಪನೋಂದಣಾಧಿಕಾರಿ
ಕಾರ್ಯಾಲಯದಲ್ಲಿ ಆಧಾರ ಕಾರ್ಡನ್ನು ಹಾಜರ ಮಾಡಿ ಪಿರ್ಯಾದಿಯಂತೆ ನಟಿಸಿ ಕುರಣಿ ಗ್ರಾಮದ ಜಮೀನ ರಿ.ಸ ನಂ: 183/1ಬ ಕ್ಷೇತ್ರ 01 ಎಕರೆ 13 ಗುಂಟೆ ಜಮೀನನ್ನು ಇನ್ನೊಬ್ಬ ಆರೋಪಿತನಾದ ಗುರುಸಿದ್ದ ಕೆಂಪಣ್ಣಾ ಮಡಿವಾಳ, ಸಾ: ನೋಗಿನಹಾಳ, ತಾ : ಹುಕ್ಕೇರಿ ಇವರಿಗೆ ಮಾರಾಟ ಮಾಡಲಾಗಿತ್ತು.
ಈ ಪ್ರಕರಣ ಜಾಡು ಹಿಡಿದ ಸಂಕೇಶ್ವರದ ಪೊಲೀಸರು ಆರೋಪಿತರಾದ ಶಿವರುದ್ರ ಪ್ರಧಾನಿ ಕುದನೂರಿ, ಶ್ರೀಮತಿ ಗಂಗವ್ವ ಶೆಟ್ಟೆಪ್ಪ ಮುದಪಾಕಿ ಇವರಿಗೆ ದಿ: 22
ರಂದು ದಸ್ತಗೀರ ಮಾಡಿ, ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಸದ್ಯ ಇಬ್ಬರು
ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 

ಸುದ್ದಿ ಓದಿ