ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಪ್ರಶಸ್ತಿಗೆ ಆಯ್ಕೆ
ಕೊಲ್ಹಾರ 07: ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಇವರು ರೋಣಿಹಾಳ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಪ್ರತಿವರ್ಷ ಕೊಡಮಾಡುವ ಸಂಗನಬಸವ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪತ್ರಿಕೋದ್ಯಮದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಶಾಕ ಬಳಗಾರ ಇವರ ಪತ್ರಿಕೋದ್ಯಮದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ಫೆಬ್ರವರಿ 9 ರ ಸೋಮವಾರ ಸಂಜೆ 5 ಗಂಟೆಗೆ ಶ್ರೀ ಸಂಗನಬಸವ ವಿದ್ಯಾವರ್ಧಕ ಸಂಘದ ಸಂಗನಬಸವ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ "ಸಂಗನಬಸವ ಉತ್ಸವ" ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಮನಗೂಳಿ ಪೂಜ್ಯರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ