ಕೊರೊನಾ ತಡೆಗೆ ಟಫ್ ರೂಲ್ಸ್‌ ಜಾರಿ: ಪಾಲಿಕೆ ಅಧಿಕಾರಿಗಳಿಂದ ಜಾಗೃತಿ

ಕೊರೊನಾ ತಡೆಗೆ ಟಫ್ ರೂಲ್ಸ್‌ ಜಾರಿ: ಪಾಲಿಕೆ ಅಧಿಕಾರಿಗಳಿಂದ ಜಾಗೃತಿ

ಲೋಕದರ್ಶನ ವರದಿ 


ಬೆಳಗಾವಿ 05: ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸ್ಫೋಟದ ಹಿನ್ನೆಲೆ ರಾಜ್ಯ ಸರಕಾರ ಟಫ್ ರೂಲ್ಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆ ಅಧಿಕಾರಿಗಳು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.  

ರಾಜ್ಯದಲ್ಲಿ ಕೊವಿಡ್ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚಳ ಹಿನ್ನಲೆ, ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್‌ ಜಾರಿ ಮಾಡಲಾಗಿದೆ. ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮಹಾನಗರ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ವೇಳೆ ಮಾಸ್ಕ್‌ ಇಲ್ಲದೇ ಎಪಿಎಂಸಿಯಲ್ಲಿ ಓಡಾಡುತ್ತಿದ್ದ ಮಹಿಳೆಗೆ ಪಾಲಿಕೆ ಸಿಬ್ಬಂದಿ ಮಾಸ್ಕ್‌ ವಿತರಣೆ ಮಾಡಿದರು. 


ಸುದ್ದಿ ಓದಿ