ಟೋಕಿಯೊ: ಸ್ಪೇನ್ ವಿರುದ್ದ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು
ಟೋಕಿಯೊ, ಜುಲೈ 27 ಒಲಿಂಪಿಕ್ಸ್‌ನ ಹಾಕಿ ಸ್ಪರ್ಧೆಯ "ಎ" ಗುಂಪಿನ ಪಂದ್ಯದಲ್ಲಿ ಭಾರತ ತಂಡ ಮಂಗಳವಾರ ಸ್ಪೇನ್ ತಂಡದ ವಿರುದ್ದ 3-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ ಭಾರತ "ಎ" ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದೆ. ಮೂರು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದು ಸೋಲಿನೊಂದಿಗೆ ಭಾರತ ಒಟ್ಟು ಆರು ಪಾಯಿಂಟ್ ಗಳನ್ನು ಸಂಪಾದಿಸಿದೆ. ಈ ಗುಂಪಿನ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆಯಲಿವೆ . ಭಾರತದ ಪರವಾಗಿ ರೂಪೀಂದ್ರಪಾಲ್ ಸಿಂಗ್ ಎರಡು ಗೋಲು ಬಾರಿಸಿದರು.
ಇನ್ನೂ ಸೌರಭ್ ಚೌಧರಿ, ಮನು ಬಾಕರ್ ಅವರನ್ನೊಳಗೊಂಡ ಭಾರತೀಯ ಗುರಿಕಾರರ ತಂಡ 10 ಮೀಟರ್ ಏರ್ ಪಿಸ್ತೂಲ್ ಮಿಕ್ಸಡ್ ಸ್ಪರ್ಧೆಯ 2ನೇ ಹಂತದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ಕುಸಿದು ಪದಕ ಸುತ್ತಿಗೆ ತೇರ್ಗಡೆಯಾಗಲು ವಿಫಲವಾಯಿತು.
2ನೇ ಹಂತದ ಅರ್ಹತಾ ಸುತ್ತಿನಲ್ಲಿ ಚೌಧರಿ ಹಾಗೂ ಭಾಕೆರ್ ಒಟ್ಟು 380 ಅಂಕಗಳನ್ನು ಕಲೆ ಹಾಕಲು ಮಾತ್ರ ಸಾಧ್ಯವಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ನಿರ್ಗಮಿಸಬೇಕಾಯಿತು.