ಬೆಳಗಾವಿಯ ಹಲಗಾ ಗ್ರಾಮದಲ್ಲಿ ದ್ವಿಚಕ್ರ ವಾಹನ ಸವಾರನ ರುಂಡ ಕತ್ತರಿಸಿ ಹತ್ಯೆ : ಹಂತಕರಿಗಾಗಿ ಪೊಲೀಸರಿಂದ ಶೋಧ

ಬೆಳಗಾವಿಯ ಹಲಗಾ ಗ್ರಾಮದಲ್ಲಿ ದ್ವಿಚಕ್ರ ವಾಹನ ಸವಾರನ ರುಂಡ ಕತ್ತರಿಸಿ ಹತ್ಯೆ : ಹಂತಕರಿಗಾಗಿ ಪೊಲೀಸರಿಂದ ಶೋಧ

ಬೆಳಗಾವಿ, ಆ, 26 : ದ್ವಿಚಕ್ರ ವಾಹನ ಮೇಲೆ ಸಾಗುತ್ತಿದ್ದ ವ್ಯಕ್ತಿಯನ್ನು ಅನಾಮಧೇಯ ವ್ಯಕ್ತಿಗಳು ಹಾಡು ಹಗಲಿನಲ್ಲಿ ಕತ್ತು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹಲಗಾ ಗ್ರಾಮದಲ್ಲಿ ಇಂದು ನಡೆದಿದೆ. 

    ಗದಗಯ್ಯ ಎಂಬ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ವ್ಯಕ್ತಿ ಬೈಕ್ ಮೇಲೆ ಹೊರಟಿದ್ದಾಗ ಅಪರಿಚಿತ ಬೆನ್ನಟ್ಟಿ ವ್ಯಕ್ತಿಯ ರುಂಡ ಕತ್ತರಿಸಿ ಕೊಲೆಗಾರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

     ಹತ್ಯೆ ಬಳಿಕ ತನ್ನ ದ್ವಿಚಕ್ರ ವಾಹನದ ಮೇಲೆಯೇ ಬಿದ್ದಿರುವ ಮೃತ ದೇಹ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಓದಿ