ಉಮೇಶ ಕತ್ತಿ ಅವರ ಮುಖಂಡತ್ವ ಸ್ಥಾನ ತುಂಬವ ಬಗ್ಗೆ ಪಕ್ಷದಲ್ಲಿ ಯಾವ ಚರ್ಚೆ ಆಗಿಲ್ಲ: ಎಲ್ಲರು ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ : ಈರಣ್ಣ ಕಡಾಡಿ
ಬೆಳಗಾವಿ, ಸೆ, 13 : ಉಮೇಶ ಕತ್ತಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಯಾರ ತುಂಬಬೇಕು ಅನ್ನುವ ಪ್ರಶ್ನಾರ್ಥಕ ಚಿನ್ನೆ ನಮ್ಮ ಮುಂದೆ ಇದೆ. ಅಯಾ ಕಾಲಕ್ಕೆ ಬಿಜೆಪಿಗೆ ನೇತೃತ್ವ ವಹಿಸುವ ನಾಯಕರು ನಮ್ಮಲ್ಲಿ ಇದ್ದಾರೆ. ಉಮೇಶ ಕತ್ತಿ ಅವರ ಮುಖಂಡತ್ವ ಸ್ಥಾನ ತುಂಬವ ಬಗ್ಗೆ ನಮ್ಮ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ನಾವು ಕೂಡಾ ಎಲ್ಲರು ಸೇರಿ ಚರ್ಚೆ ನಡೆಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಇಂದಿಲ್ಲಿ ಹೇಳಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಜಿಲ್ಲೆಯ ಮುಖಂಡತ್ವಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಇವರ ಹೆಸರುಗಳು ಕುರಿತು ಚರ್ಚೆ ನಡೆದಿವೆ ಎನ್ನುವ ಮಾಧ್ಯಮ ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಡಾಡಿ ಅವರು, ಪಕ್ಷದ ಲ್ಲಿರುವ ಮುಖಂಡರ ಬಗ್ಗೆ ಚರ್ಚೆ ಆಗುವದು ಸರ್ವಸಾಮಾನ್ಯ. ಆದರೆ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವದೆ ಚರ್ಚೆ ಆಗಿಲ್ಲ. ನಾಯಕತ್ವ ಅನ್ನುವದು ಯಾರೋ ಕೊಟ್ಟ ಕಳಿಸುವದಂತದಲ್ಲ. ನಮ್ಮ ಕರ್ತತ್ವ, ಶಕ್ತಿ, ನಮ್ಮ ಚಟುವಟಿಕೆಗಳ ಮೇಲೆ, ನಮ್ಮ ವ್ಯವಹಾರ ಮೇಲೆ ನಾಯಕತ್ವ ನಿಂತಿರುತ್ತದೆ. ಹೀಗಾಗಿ ಕಾಲಕ್ರಮೇಣ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆ ಇದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ಬಹಳ ದೊಡ್ಡ ಜಿಲ್ಲೆ ಯಾಗಿದೆ. ಇಲ್ಲಿ ಉಮೇಶ ಕತ್ತಿ ಅವರ ಅಕಾಲಿಕ ನಿಧನ ಹೊಂದಿರುವದರಿಂದ ಮುಖಂಡತ್ವದ ಕೊರತೆ ನಮ್ಮ ಮುಂದೆ ಇದೆ. ಜಿಲ್ಲೆಯ ಮುಖಂಡತ್ವ ಆಯ್ಕೆ ಮಾಡುವದು ನಮ್ಮ ಜಿಲ್ಲೆಯ ಎಲ್ಲ ಮುಖಂಡ ಮುಂದೆ ಪ್ರಶ್ನೆ ಎದರು ನಿಂತಿರುವದು ನಿಜ ಅದನ್ನು ಎಲ್ಲರು ಸೇರಿ ಮಾತುಕತೆ ಮೂಲಕ ಆಯ್ಕೆ ಮಾಡಿ ಪಕ್ಷ ವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ನುಡಿದರು.